ನವದೆಹಲಿ: ಭಾರತೀಯ ಸೇನೆಯ ವಿಶೇಷ ಪಡೆಗಳಿಗೆ ಮತ್ತಷ್ಟು ಶಕ್ತಿಯನ್ನು ತಂದುಕೊಡುವ ಸಲುವಾಗಿ, ಕೇಂದ್ರ ಸರ್ಕಾರವು ಅಮೆರಿಕಾದಿಂದ ಅಸಾಲ್ಟ್ ರೈಫಲ್ಗಳನ್ನು, ಶಸ್ತ್ರಾಸ್ತ್ರಗಳನ್ನು, ಪ್ಯಾರಾಚೂಟ್ಗಳನ್ನು ಮತ್ತು ಇತರ ಹಲವಾರು ವಿಶೇಷ ಸಲಕರಣೆಗಳನ್ನು ಖರೀದಿ ಮಾಡಲು ನಿರ್ಧರಿಸಿದೆ.
‘ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅತೀ ಮುಖ್ಯವಾದ ಸಭೆಯನ್ನು ನಡೆಸಿ, ಅಲ್ಲಿ ಅಮೆರಿಕನ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ನಿಂದ ರೂ.1,000 ಕೋಟಿ ಮೊತ್ತದ ರಕ್ಷಣಾ ಸಲಕರಣೆಗಳನ್ನು ಖರೀದಿ ಮಾಡುವ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ’ ಎಂದು ಮೂಲಗಳು ತಿಳಿಸಿವೆ.
ಸಭೆಯ ಸಂದರ್ಭದಲ್ಲಿ ರಕ್ಷಣಾ ಸಚಿವಾಲಯವು, ಸೇನೆಯ ವಿಶೇಷ ಪಡೆ ಘಟಕದ ಪ್ಯಾರಾಚೂಟ್ ರಿಜಿಮೆಂಟ್ಗಾಗಿ ಅಸಾಲ್ಟ್ ರೈಫಲ್, ಶಸ್ತ್ರಾಸ್ತ್ರ ಮತ್ತು ಯುದ್ಧ ಸಂದರ್ಭದಲ್ಲಿ ಬಳಸಲ್ಪಡುವಂತಹ ಪ್ಯಾರಾಚೂಟ್ ಇತ್ಯಾದಿ ವಿವಿಧ ಮಾದರಿಗಳ ರಕ್ಷಣಾ ಸಲಕರಣೆ ಖರೀದಿ ಮಾಡುವ ಬಗ್ಗೆ ಚರ್ಚೆಯನ್ನು ನಡೆಸಲಿದೆ ಎನ್ನಲಾಗಿದೆ.
ಒಂದು ವೇಳೆ ಪ್ರಸ್ತಾವನೆಗೆ ಅನುಮೋದನೆ ಸಿಕ್ಕರೆ, ಫಾರಿನ್ ಮಿಲಿಟರಿ ಸೇಲ್ಸ್ ರೂಟ್ ಅಡಿಯಲ್ಲಿ ಸರ್ಕಾರದಿಂದ ಸರ್ಕಾರ ಒಪ್ಪಂದ ಮಾಡಿಕೊಂಡು ಅಮೆರಿಕಾದಿಂದ ಈ ಸಲಕರಣೆಗಳನ್ನು ಖರೀದಿ ಮಾಡಬೇಕಾಗುತ್ತದೆ.
ಭಾರತೀಯ ಸೇನೆಯು ಈಗಾಗಲೇ ಅಮೆರಿಕಾದ M4A1 ಅಸಾಲ್ಟ್ ರೈಫಲ್ ಅನ್ನು ಹೊಂದಿದೆ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಗಳು ಇವುಗಳನ್ನು ಯಥೇಚ್ಛವಾಗಿ ಬಳಕೆ ಮಾಡುತ್ತವೆ. ಸರ್ಕಾರವು ಸೇನೆಯ ವಿಶೇಷ ಪಡೆಗಳನ್ನು ಹೆಚ್ಚಿನ ಕಾರ್ಬಿನ್ಸ್ಗಳ ಮೂಲಕ ಇನ್ನಷ್ಟು ಬಲಪಡಿಸಲು ಯೋಜಿಸಿದೆ ಎನ್ನಲಾಗಿದೆ. ಈ ಕಾರ್ಬಿನ್ಸ್ಗಳು ಪ್ರಧಾನಿಗಳಿಗೆ ರಕ್ಷಣೆಯನ್ನು ನೀಡುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ಪಿಜಿ)ಗಳು ಬಳಸುವ ಬೆಲ್ಜಿಯಂ ರೈಫಲ್ಸ್ಗಳ ಮಾದರಿಯಲ್ಲಿರುತ್ತವೆ.
ಫೆಬ್ರವರಿಯಲ್ಲಿ, ರಕ್ಷಣಾ ಸಚಿವಾಲಯವು 72,400 7.6 mm Sig Sauer ಅಸಾಲ್ಟ್ ರೈಫಲ್ಗಳನ್ನು ಫಾಸ್ಟ್-ಟ್ರ್ಯಾಕ್ ಪ್ರಕ್ರಿಯೆಗಳ ಮೂಲಕ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ರೂ.700 ಕೋಟಿಗಳ ಒಪ್ಪಂದ ಇದಾಗಿದ್ದು ಇನ್ಫಾಂಟ್ರಿಯನ್ನು ಆಧುನೀಕರಿಸುವ ಉದ್ದೇಶವನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.