ನವದೆಹಲಿ: ಈ ವರ್ಷದ ಮಾರ್ಚ್ ತಿಂಗಳವರೆಗಿನ ಆದಾಯ ತೆರಿಗೆ ಸಂಗ್ರಹ ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಕೇಂದ್ರ ಸರ್ಕಾರದ ವರದಿ ಹೇಳಿದೆ. ಸುಮಾರು 10 ಲಕ್ಷ ಕೋಟಿ ರೂಪಾಯಿ ಆದಾಯ ತೆರಿಗೆ ಇದುವರೆಗೆ ಸಂಗ್ರಹವಾಗಿದೆ. ಪ್ರಸ್ತುತ ಹಣಕಾಸು ವರ್ಷ ಮಾರ್ಚ್ ತಿಂಗಳಲ್ಲಿ ಅಂತ್ಯವಾಗುತ್ತಿರುವ ಹಿನ್ನಲೆಯಲ್ಲಿ ತೆರಿಗೆ ಪಾವತಿ ಪ್ರಮಾಣ ಏರಿಕೆಯನ್ನು ಕಾಣುತ್ತಿದೆ.
ದೇಶದಾದ್ಯಂತದ ಸಂಪೂರ್ಣ ಮುಂಗಡ ತೆರಿಗೆ ವರದಿ ಇನ್ನೂ ಬಂದಿಲ್ಲವಾದ್ದರಿಂದ ಈಗ ಲಭ್ಯವಾಗಿರುವ ವರದಿಯನ್ನು ಅಂದಾಜು ಎಂದೇ ಪರಿಗಣಿಸಬೇಕಾಗುತ್ತದೆ. ಎಪ್ರಿಲ್-ಜನವರಿ ತಿಂಗಳಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ ರೂ.7.89 ಲಕ್ಷ ಕೋಟಿಯಾಗಿದೆ. ಇದುವರೆಗಿನ ಲಭ್ಯತೆಯ ಪ್ರಕಾರ, ಮಾರ್ಚ್ ಮಧ್ಯದವರೆಗೆ 10 ಲಕ್ಷ ಕೋಟಿ ಆದಾಯ ಸಂಗ್ರವಾಗಿದೆ.
ಪ್ರಸ್ತುತ ಹಣಕಾಸು ವರ್ಷದ ನೇರ ತೆರಿಗೆ ಸಂಗ್ರಹದ ಟಾರ್ಗೆಟ್ ರೂ.12 ಲಕ್ಷ ಕೋಟಿ. ಈ ಟಾರ್ಗೆಟ್ ಹಿಂದಿನ ರೂ. 11.5 ಲಕ್ಷ ಕೋಟಿಗಿಂತ ಹೆಚ್ಚಾಗಿದೆ. 2019-20ರ ಮಧ್ಯಂತರ ಬಜೆಟ್ನಲ್ಲಿ ಟಾರ್ಗೆಟ್ ಅನ್ನು 50 ಸಾವಿರ ಕೋಟಿಯನ್ನು ಹೆಚ್ಚಳ ಮಾಡಲಾಗಿದೆ.
‘ನೇರ ತೆರಿಗೆಯಲ್ಲಿ, ನಮಗೆ ಟಾರ್ಗೆಟ್ ಅನ್ನು ತಲುಪುವ ಭರವಸೆ ಇದೆ. ಆದರೆ ಪರೋಕ್ಷ ತೆರಿಗೆಯಲ್ಲಿ ತುಸು ಕಡಿಮೆಯಾಗಬಹುದು’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಹೇಳಿದ್ದಾರೆ.
ಎನ್ಡಿಎ ಸರ್ಕಾರದಡಿ, ನೇರ ತೆರಿಗೆ ಸಂಗ್ರಹ ಏರಿಕೆಯನ್ನು ಕಾಣುತ್ತಿದೆ. ಮಧ್ಯಂತರ ಬಜೆಟ್ನಲ್ಲಿ, ವಿತ್ತ ಸಚಿವರಾಗಿದ್ದ ಪಿಯೂಶ್ ಗೋಯಲ್ ಅವರು ‘ಭಾರತದ ತೆರಿಗೆ ವಲಯದಲ್ಲಿ, ತೆರಿಗೆದಾರರ ಸಂಖ್ಯೆ ದುಪ್ಪಟ್ಟಾಗಿದೆ. 3.79 ಕೋಟಿಯಿಂದ 6.85 ಕೋಟಿಗೆ ಏರಿಕೆಯಾಗಿದೆ. ಅಲ್ಲದೇ, ಭಾರತದ ತೆರಿಗೆ-ಜಿಡಿಪಿ ಅನುಪಾತ ಹಿಂದಿನ ಹಣಕಾಸು ವರ್ಷದಲ್ಲಿ ಶೇ.5.89 ಇತ್ತು. ಇದು ಅತ್ಯುತ್ತಮ ಸಾಧನೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.