ನವದೆಹಲಿ: ಅಬುಧಾಬಿಯಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್ನಲ್ಲಿ ಭಾರತ 188 ಪದಕಗಳನ್ನು ಜಯಿಸಿದೆ. ಇದರಲ್ಲಿ 50 ಬಂಗಾರದ ಪದಕಗಳಾಗಿವೆ, 63 ಬೆಳ್ಳಿ ಮತ್ತು 75 ಕಂಚಿನ ಪದಕಗಳಾಗಿವೆ.
ಟೇಬಲ್ ಟೆನ್ನಿಸ್ನಲ್ಲಿ ನಾಲ್ಕು ಬಂಗಾರದ ಪದಕ ಮತ್ತು ಒಂದು ಬೆಳ್ಳಿಯ ಪದಕವನ್ನು ಗೆಲ್ಲುವ ಮೂಲಕ ಭಾರತೀಯ ಕ್ರೀಡಾಳುಗಳು ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ. ಈ ಕ್ರೀಡಾಕೂಟ ಆರಂಭವಾಗುವುದಕ್ಕೂ ಮುನ್ನ ಕ್ರೀಡಾಳುಗಳು ಗುರುಗ್ರಾಮ್, ಜೋಧ್ಪುರ, ಹರಿಯಾಣ ಮತ್ತು ಮುಂಬಯಿನಲ್ಲಿ ಪೂರ್ವಸಿದ್ಧತಾ ತರಬೇತಿಗಳಲ್ಲಿ ಭಾಗಿಯಾಗಿದ್ದಾರೆ. ಇದು ಅವರಿಗೆ ಪದಕ ಗೆಲ್ಲುವಲ್ಲಿ ಸಹಾಯ ಮಾಡಿದೆ ಎಂದು ಕೋಚ್ ಶೀತಲ್ ನೇಗಿ ತಿಳಿಸಿದ್ದಾರೆ.
ಕ್ರೀಡಾಕೂಟದಲ್ಲಿ ಪುರುಷರ ತಂಡ ಎರಡು ಬಂಗಾರದ ಪದಕಗಳನ್ನು ಗೆದ್ದಿದೆ.
ಜುಡೋದಲ್ಲಿ ಹರಿಯಾಣದ ಯುವಕ ಸೋನು ಕುಮಾರ್ ಅವರು ಬಂಗಾರ ಜಯಿಸಿದ್ದಾರೆ. ಸ್ಕ್ವಾಟ್ ಮತ್ತು ಬೆಂಚ್ ಪ್ರೆಸ್ನಲ್ಲಿ ಮುಸ್ಕಾನ್ ಬೆಳ್ಳಿ ಜಯಿಸಿದ್ದಾರೆ. ಇವರು ಡೆಡ್ಲಿಫ್ಟಿಂಗ್ನಲ್ಲೂ ಬಂಗಾರ ಜಯಿಸಿದ್ದಾರೆ.
ರೋಲರ್ ಸ್ಕೇಟಿಂಗ್ನಲ್ಲಿ, ವಿಜಯ್, ಹುಫೆಜ ಆಯುಬ್ ಶೇಖ್, ಜಶನ್ ದೀಪ್ ಸಿಂಗ್, ಹಷ್ದ್ ಗಾಂವ್ಕರ್, ಹಾರ್ದಿಕ್ ಅಗರ್ವಾಲ್ ಅವರು ಪದಕ ಜಯಿಸಿದ್ದಾರೆ. ಮಹಿಳಾ ಕೆಟಗರಿಯಲ್ಲಿ ಗೋವಾದ ಸಂತೋಷಿ ವಿಜಯ್ ಕೌತಂಕರ್ ಅವರು ನಾಲ್ಕು ಬೆಳ್ಳಿ ಜಯಿಸಿದ್ದಾರೆ.
ಭಾರತ ಒಟ್ಟು 378 ಕ್ರೀಡಾಳುಗಳ ಬಲಿಷ್ಠ ತಂಡವನ್ನು ಈ ಕ್ರೀಡಾಕೂಟಕ್ಕೆ ಕಳುಹಿಸಿಕೊಟ್ಟಿತ್ತು. ಈ 15 ನೇ ಸಂಚಿಕೆಯ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್ ಅಬುಧಾಬಿಯಲ್ಲಿ ಜರುಗಿದ್ದು, ಮಾ.21ರಂದು ಅಂತ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.