ನವದೆಹಲಿ: ಲಕ್ಷದ್ವೀಪ ಮತ್ತು ಮಿನಿಕೋಯ್ಗೆ ಲಾಜಿಸ್ಟಿಕ್ ಸಪೋರ್ಟ್ನ್ನು ನೀಡುವ ಸಲುವಾಗಿ ಭಾರತೀಯ ನೌಕೆಯ ದಕ್ಷಿಣ ನಾವೆಲ್ ಕಮಾಂಡ್, ವಿವಿಧೋದ್ದೇಶ ಹಡಗು ಎಂವಿ ಟ್ರಿಟಾನ್ ಲಿಬರ್ಟಿಯನ್ನು ಎಂ/ಎಸ್ ಟ್ರಿಟಾನ್ ಮ್ಯಾರಿಟೈಮ್ ಪ್ರೈಲಿಮಿಟೆಡ್ ಐಸ್ಲ್ಯಾಂಡ್ನಿಂದ ಖರೀದಿ ಮಾಡಿದೆ.
ನಾವೆಲ್ ಹಾರ್ಬರ್ ಆಪರೇಶನ್ಗೆ ಬೆಂಬಲವನ್ನು ನೀಡುವ ಸಲುವಾಗಿ, ಕೇರಳ ಮತ್ತು ಮಾಹೆಯಾದ್ಯಂತ ಈ ಹಡಗು ಕಾರ್ಯಾಚರಿಸಲಿದೆ ಮತ್ತು ಮಾರ್ಚ್ ಮಧ್ಯಭಾಗದಿಂದ ಒಂದು ವರ್ಷಗಳ ಕಾಲ ಇತರ ಕಾರ್ಯಾಚರಣಾ ಬೆಂಬಲವನ್ನು ಇದು ಒದಗಿಸಲಿದೆ.
ದಕ್ಷಿಣ ನಾವೆಲ್ ಕಮಾಂಡ್ ಮುಖ್ಯಸ್ಥ ದೀಪಕ್ ಕುಮಾರ್ ಮತ್ತು ಟ್ರಿಟನ್ ಮ್ಯಾರಿಟೈಮ್ ಪ್ರೈಲಿ ನಿರ್ದೇಶಕ ಚೇತನ್ ಪಾರೇಖ್ ಅವರು ಈ ಬಗೆಗಿನ ಒಪ್ಪಂದಕ್ಕೆ ಮಾ.15ರಂದು ಸಹಿ ಹಾಕಿದ್ದಾರೆ. ಆನ್ಲೈನ್ ಓಪನ್ ಟೆಂಡರಿಂಗ್ ಪ್ರಕ್ರಿಯೆ ಮೂಲಕ ನೇಮಕಾತಿಯನ್ನು ಅಂತಿಮಗೊಳಿಸಲಾಗಿದೆ.
ವರದಿಯ ಪ್ರಕಾರ, ಲಕ್ಷದ್ವೀಪ ಮತ್ತು ಮಿನಿಕೋಯ್ ದ್ವೀಪಗಳಲ್ಲಿನ ನೌಕಾ ಬೇರ್ಪಡುವಿಕೆಗಳನ್ನು ಈ ನಿಯೋಜನೆ ಗಣನೀಯವಾಗಿ ವೃದ್ಧಿಸಲಿದೆ. ಇದರಲ್ಲಿ ನೌಕಾ ಗಸ್ತು ಸಿಬ್ಬಂದಿಗಳ ಕಾರ್ಯಕ್ಷಮತೆಗಾಗಿ ನಿಗದಿತ ವೇಳಾಪಟ್ಟಿಯನ್ನು ಅನುಸರಿಸಬಹುದು, ಈ ದ್ವೀಪಗಳ ಮೇಲೆ ಪೋಸ್ಟ್ ಮಾಡಲಾದ ಸಿಬ್ಬಂದಿಗಳ ದೀರ್ಘಾವಧಿಯ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗಲಿದೆ.
ಪ್ರಯಾಣಿಕ ಹಡಗುಗಳ ವೇಳಾಪಟ್ಟಿ ತೀವ್ರವಾಗಿ ಕುಂಠಿತವಾಗುವ ಮಳೆಗಾಲದ ಸಂದರ್ಭಗಳಲ್ಲಿ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿರುತ್ತದೆ. ಈ ಹಡಗಿನಲ್ಲಿ, ಅತ್ಯಾಧುನಿಕ ಅಗ್ನಿಶಾಮಕ ವ್ಯವಸ್ಥೆ ಇದೆ. ಸಮುದ್ರದ ಮಾನವೀಯ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗೆ ಇದನ್ನು ಬಳಸಬಹುದಾಗಿದೆ. ಹಡಗಿನ ಸಂಯೋಜನೆ ನೌಕಾ ಹಡಗುಗಳನ್ನು ನಿರ್ದಿಷ್ಟ ಕಾರ್ಯಾಚರಣೆಗಳಿಗೆ ಲಾಜಿಸ್ಟಿಕ್ ಸಪೋರ್ಟ್ ನೀಡುವ ಕರ್ತವ್ಯಗಳಿಂದ ದೂರವಿರಿಸಲು ಸಹಕಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.