ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಭಾರತದಲ್ಲಿ ಮಾ. 9 ರವರೆಗೆ ನೋಂದಣಿಗೊಂಡ ರಾಜಕೀಯ ಪಕ್ಷಗಳ ಮಾಹಿತಿಯ ವರದಿಯನ್ನು ಚುನಾವಣಾ ಆಯೋಗ ಬಿಡುಗಡೆಗೊಳಿಸಿದ್ದು, ದೇಶದಲ್ಲಿ ಒಟ್ಟು 2,293 ರಾಜಕೀಯ ಪಕ್ಷಗಳಿವೆ ಎಂದು ತಿಳಿಸಿದೆ. ಇದರಲ್ಲಿ 149 ಪಕ್ಷಗಳು ಈ ವರ್ಷದ ಫೆಬ್ರವರಿ-ಮಾರ್ಚ್ ನಡುವೆ ನೋಂದಾವಣಿಗೊಂಡಿವೆ.
ಇತ್ತೀಚಿಗೆ ನೋಂದಾವಣೆಗೊಂಡ 149 ರಾಜಕೀಯ ಪಕ್ಷಗಳ ಪೈಕಿ, ಬಿಹಾರದ ಬಹುಜನ್ ಆಝಾದ್ ಪಾರ್ಟಿ, ಯುಪಿಯ ಸಾಮೂಹಿಕ್ ಏಕ್ತಾ ಪಾರ್ಟಿ, ಜೈಪುರ್ ರಾಷ್ಟ್ರೀಯ ಸಾಫ್ ನೀತಿ ಪಾರ್ಟಿ, ದೆಹಲಿಯ ಸಬ್ಸಿ ಬಡೀ ಪಾರ್ಟಿ, ತೆಲಂಗಾಣದ ಭರೋಸ ಪಾರ್ಟಿ, ಕೊಯಂಬತ್ತೂರಿನ ನ್ಯೂ ಜನರೇಶನ್ ಪೀಪಲ್ಸ್ ಪಾರ್ಟಿ ಮುಂತಾದವುಗಳು ಸೇರಿವೆ.
ನೋಂದಾವಣಿಗೊಂಡ 2,293 ಪಕ್ಷಗಳ ಪೈಕಿ 7 ‘ರಾಷ್ಟ್ರೀಯ ಮಾನ್ಯತೆ’ ಮತ್ತು ‘ರಾಜ್ಯ ಮಾನ್ಯತೆ’ ಪಡೆದ ಪಕ್ಷಗಳಾಗಿವೆ. ಉಳಿದವು ಮಾನ್ಯತೆಯಿಲ್ಲದ ಪಕ್ಷಗಳು. ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ನಿಗದಿತ ಪ್ರಮಾಣದ ಮತಗಳನ್ನು ಅಥವಾ ಸ್ಥಾನಗಳನ್ನು ಪಡೆದರೆ ಮಾತ್ರ ಈ ಪಕ್ಷಗಳು ಮಾನ್ಯತೆಯನ್ನು ಪಡೆಯುತ್ತವೆ.
ನೋಂದಾವಣೆಗೊಂಡರೂ ಮಾನ್ಯತೆ ಪಡೆಯದ ಪಕ್ಷಗಳಿಗೆ ಚುನಾವಣೆಯನ್ನು ಎದುರಿಸಲು ಯಾವುದೇ ನಿಗದಿತ ಚಿಹ್ನೆಗಳಿಲ್ಲ. ಇವುಗಳು ಚುನಾವಣಾ ಆಯೋಗ ನೀಡುವ ’ಮುಕ್ತ ಚಿಹ್ನೆ’ಗಳ ಪಟ್ಟಿಯಿಂದ ಯಾವುದಾದರೂ ಒಂದನ್ನು ಪಡೆದುಕೊಂಡು ಚುನಾವಣೆ ಎದುರಿಸಬೇಕು. ವರದಿಯ ಪ್ರಕಾರ ಪ್ರಸ್ತುತ ಚುನಾವಣಾ ಆಯೋಗದ ಬಳಿಕ ಅಂತಹ 84 ಮುಕ್ತ ಚಿಹ್ನೆಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.