ನವದೆಹಲಿ: ಭಾರತೀಯ ವಾಯುಸೇನೆಯು ಕಳೆದ ರಾತ್ರಿ ಪಂಜಾಬ್ ಮತ್ತು ಜಮ್ಮು ಗಡಿ ಪ್ರದೇಶದಲ್ಲಿ ಪ್ರಮುಖ ಪೂರ್ವ ಸಿದ್ಧತಾ ಸಮರಾಭ್ಯಾಸವನ್ನು ಹಮ್ಮಿಕೊಂಡಿತ್ತು. ಅಪಾರ ಪ್ರಮಾಣದ ಯುದ್ಧ ವಿಮಾನಗಳು ಇದರಲ್ಲಿ ಭಾಗಿಯಾಗಿದ್ದವು.
ಸಮರಾಭ್ಯಾಸದ ವೇಳೆ, ಗಡಿ ಜಿಲ್ಲೆಗಳಾದ ಪಂಜಾಬ್ನ ಅಮೃತಸರ ಸೇರಿದಂತೆ ಇತರ ಕಡೆಗಳಲ್ಲಿ ಫ್ರಂಟ್ಲೈನ್ ಏರ್ಕ್ರಾಫ್ಟ್ ಸೇರಿದಂತೆ ಭಾರತೀಯ ವಾಯುಸೇನೆಯ ಜೆಟ್ಗಳು ಸೂಪರ್ಸಾನಿಕ್ ವೇಗದಲ್ಲಿ ಹಾರಾಟ ನಡೆಸಿವೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ವಾಯುನೆಲೆಯನ್ನು ಪಾಕಿಸ್ಥಾನದ ಯುದ್ಧ ವಿಮಾನಗಳು ಅತಿಕ್ರಮಿಸುವ ದುಸ್ಸಾಹಸಕ್ಕೆ ಇಳಿದರೆ ಅವುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಅಭ್ಯಾಸ ಮಾಡಿಕೊಳ್ಳುವ ಸಲುವಾಗಿ ನಡೆಸಲಾದ ಪೂರ್ವಸಿದ್ಧತಾ ಸಮರಾಭ್ಯಾಸ ಇದಾಗಿದೆ.
ಪಾಕಿಸ್ಥಾನದ ಬಾಲಕೋಟ್ಗೆ ನುಗ್ಗಿ ಅಲ್ಲಿದ್ದ ಜೈಶೇ ಇ ಮೊಹಮ್ಮದ್ ಉಗ್ರ ಶಿಬಿರಗಳನ್ನು 1000 ಕೆಜಿ ಬಾಂಬ್ ಹಾಕಿ ಧ್ವಂಸ ಮಾಡಿದ ತರುವಾಯ ಭಾರತೀಯ ವಾಯುಸೇನೆಯು ಹೈಅಲರ್ಟ್ನಲ್ಲಿದೆ.
ಕೆಳ ದಿನಗಳ ಹಿಂದೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಯುದ್ಧ ವಿಮಾನಗಳು ಸೂಪರ್ಸಾನಿಕ್ ವೇಗದಲ್ಲಿ ಹಾರಾಟ ನಡೆಸಿವೆ. ಒಂದು ವೇಳೆ ಈ ಯುದ್ಧವಿಮಾನಗಳು ಭಾರತದ ಗಡಿಯನ್ನು ಪ್ರವೇಶಿಸಿದರೆ ಪ್ರತ್ಯುತ್ತರ ನೀಡುವ ಸಲುವಾಗಿ ಭಾರತೀಯ ವಾಯುಸೇನೆ ಸದಾ ಸನ್ನದ್ಧ ಸ್ಥಿತಿಯಲ್ಲಿದೆ.
ಮಿಗ್-21 ಫೈಟರ್ ಜೆಟ್ ಮೂಲಕ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.