ನವದೆಹಲಿ: ಸೇನೆಯ ಇನ್ಫಾಂಟ್ರಿ ಪಡೆಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ, ಡಿಆರ್ಡಿಓ ಗುರುವಾರ ಮ್ಯಾನ್ ಪೋರ್ಟೆಬಲ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್(MPATGM)ನ್ನು ರಾಜಸ್ಥಾನದ ಮರುಭೂಮಿಯಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.
ಡಿಆರ್ಡಿಓ ‘MPATGM’ ನ್ನು ಅಭಿವೃದ್ಧಿಪಡಿಸಿದ್ದು, ಸಂಯೋಜಿತ ಆವಿಯಾನಿಕ್ಸ್ನೊಂದಿಗೆ ಅಲ್ಟ್ರಾ-ಮಾಡರ್ನ್ ಇಮೇಜಿಂಗ್ ಇನ್ಫ್ರೇರ್ಡ್ ರ್ಯಾಡರ್ ಸೀಕರ್ ಸೇರಿದಂತೆ ಹಲವಾರು ಅತ್ಯಾಧುನಿಕ ಗುಣಲಕ್ಷಣಗಳನ್ನು ಈ ಮಿಸೈಲ್ ಹೊಂದಿದೆ. ವಿ.ಎಸ್.ಎಸ್ ಮೂರ್ತಿ ಅವರು ಈ ಮಿಸೈಲ್ ಅಭಿವೃದ್ಧಿ ಯೋಜನೆಯ ಪ್ರೋಗ್ರಾಂ ಡೈರೆಕ್ಟರ್ ಆಗಿದ್ದು, ಕೆ.ಇ ಕಪಾಡಿಯ ಅವರು ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದಾರೆ.
MPATGM ಮೂರನೇ ತಲೆಮಾರಿನ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ATGM) ಆಗಿದ್ದು, ಉನ್ನತ ಮಟ್ಟದ ಶ್ರೇಣಿಯ ಆ್ಯಂಟಿ ಟ್ಯಾಂಕ್ ಸಿಡಿತಲೆಯ ಲೋಡ್ನ್ನು ಇದು ಹೊಂದಿರುತ್ತದೆ, 2.5 ಕಿಲೋಮೀಟರ್ ಇದರ ಗರಿಷ್ಠ ರೇಂಜ್ ಆಗಿದೆ. 2021ರಿಂದ ಈ ಕ್ಷಿಪಣಿಯ ಸಾಮೂಹಿಕ ಉತ್ಪಾದನೆ ಆರಂಭಗೊಳ್ಳಲಿದೆ.
ಮಂಗಳವಾರ ಡಿಆರ್ಡಿಓ ಪಿನಾಕ ಗೈಡೆಡ್ ಮಿಸೈಲ್ನ್ನು ರಾಜಸ್ಥಾನದ ಪ್ರೋಖ್ರಾನ್ನಲ್ಲಿ ಮೂರನೇ ಬಾರಿಗೆ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.
#WATCH: India successfully carried out trial of the Man Portable Anti Tank Guided Missile (MP-ATGM) being developed for infantry troops of the Army. The DRDO carried out the trial of the missile with 2-3 km strike range last night in Rajasthan desert. pic.twitter.com/fUcDj3Jlww
— ANI (@ANI) March 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.