ನವದೆಹಲಿ: ಚೀನಾದೊಂದಿಗಿನ ರಾಜತಾಂತ್ರಿಕತೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ದುರ್ಬಲ ಎಂದು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ ಪ್ರಹಾರ ನಡೆಸಿದ್ದಾರೆ.
‘ನಿಮ್ಮ ಮುತ್ತಜ್ಜ ಭಾರತವನ್ನು ನಿರ್ಲಕ್ಷ್ಯಿಸಿ ಚೀನಾಗೆ ಉಡುಗೊರೆ ನೀಡದೇ ಇರುತ್ತಿದ್ದರೆ ಇಂದು ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇರುತ್ತಲೇ ಇರಲಿಲ್ಲ’ ಎಂದು ರಾಹುಲ್ ಗಾಂಧಿಗೆ ಬಿಜೆಪಿ ಟಾಂಗ್ ನೀಡಿದೆ.
‘ನಿಮ್ಮ ಕುಟುಂಬ ಮಾಡಿದ ತಪ್ಪನ್ನು ತಿದ್ದುವ ಪ್ರಯತ್ನವನ್ನು ಭಾರತ ಮಾಡುತ್ತಿದೆ. ಉಗ್ರವಾದದ ವಿರುದ್ಧ ಹೋರಾಟದಲ್ಲಿ ಭಾರತ ವಿಜಯಿಯಾಗುತ್ತದೆ ಎಂಬ ಭರವಸೆ ನೀಡುತ್ತೇವೆ. ಚೀನಾದ ರಾಯಭಾರಿಯೊಂದಿಗೆ ಗುಪ್ತ ಸಮಾಲೋಚನೆ ಮಾಡಿದ್ದ ನೀವು ಎಲ್ಲವನ್ನೂ ಮೋದಿ ತಲೆಗೆ ಹಾಕಿದ್ದಿರಿ’ ಎಂದು ಬಿಜೆಪಿ ಅಧಿಕೃತ ಟ್ವಿಟರ್ನಲ್ಲಿ ಬರೆಯಲಾಗಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಬಗ್ಗೆ ಮೋದಿ ಭಯ ಪಡುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದರು.
ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿ, ಜವಹಾರ್ ಲಾಲ್ ನೆಹರೂ ಅವರು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಸ್ಥಾನವನ್ನು ಚೀನಾಗೆ ಸಿಗುವಂತೆ ಮಾಡಿದ್ದನ್ನು ಅವರಿಗೆ ಜ್ಞಾಪಿಸಿಕೊಟ್ಟಿದೆ.
ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯನಾಗುವ ಆಫರ್ ಬಂದಿದ್ದರೂ, ಅದನ್ನು ಬಿಟ್ಟುಕೊಟ್ಟು ಚೀನಾಗೆ ಆ ಸ್ಥಾನವನ್ನು ನೆಹರೂ ಅವರು ದೊರಕಿಸಿಕೊಟ್ಟಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.