ನವದೆಹಲಿ: ಡಿಜಿಟಲ್ ಚಾನೆಲ್ Eros Now ಒಂದು ಐಕಾನಿಕ್ ವೆಬ್ ಸಿರೀಸ್ನ್ನು ಹೊರತರಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಆಧರಿಸಿದ ವೆಬ್ ಸಿರೀಸ್ ಇದಾಗಿದ್ದು, ಮುಂದಿನ ತಿಂಗಳೇ ಬಿಡುಗಡೆಗೊಳ್ಳಲಿದೆ. ಓ ಮೈ ಗಾಡ್, 102 ನಾಟ್ ಔಟ್ನಂತಹ ಹಿಟ್ಗಳನ್ನು ನೀಡಿದ ಉಮೇಶ್ ಶುಕ್ಲಾ ಅವರು ಇದನ್ನು ನಿರ್ದೇಶಿಸಿದ್ದಾರೆ.
‘ಮೋದಿ’ ಎಂಬ ಶೀರ್ಷಿಕೆಯ ವೆಬ್ ಸಿರೀಸ್ 10 ಭಾಗಗಳಲ್ಲಿ ಮೂಡಿಬರಲಿದ್ದು, ಚಾಯ್ವಾಲಾನಿಂದ ಹಿಡಿದು ಪ್ರಧಾನಿಯಾಗುವರೆಗಿನ ನರೇಂದ್ರ ಮೋದಿಯವರ ಇಡೀ ಜೀವನ ಚರಿತ್ರೆಯನ್ನು ಜನರ ಮುಂದೆ ತೆರೆದಿಡಲಿದೆ. ಇರೋಸ್ ನೌ ಮತ್ತು ಬೆಂಚ್ಮಾರ್ಕ್ ಪಿಕ್ಚರ್ಸ್ ಇದನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಉಮೇಶ್ ಶುಕ್ಲಾ, ‘ವಯಸ್ಸಾದವರನ್ನು, ಯುವಕರನ್ನು ಮೋದಿಯವರ ವ್ಯಕ್ತಿತ್ವ ಸೆಳೆಯುತ್ತದೆ. ಅವರ ಹಾಸ್ಯ ಪ್ರಜ್ಞೆ, ಆಧ್ಯಾತ್ಮ ಮತ್ತು ತಂತ್ರಜ್ಞಾನದೆಡೆಗಿನ ಪ್ರೀತಿ ಅವರನ್ನೊಬ್ಬ ವಿಭಿನ್ನ ನಾಯಕನನ್ನಾಗಿಸಿದೆ. ನವಭಾರತದ ನಾಯಕನ ಜೀವನದ ಬಗ್ಗೆ ವೆಬ್ ಸಿರೀಸ್ ಮಾಡುವ ಮಹತ್ತರವಾದ ಜವಾಬ್ದಾರಿಯನ್ನು ನಾನು ಹೊತ್ತುಕೊಂಡಿದ್ದೇನೆ, ಇದರ 10 ಭಾಗಗಳೂ ಜನರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ. ಅವರ ಬಾಲ್ಯದ ದಿನಗಳು, ದಿಟ್ಟ ನಿರ್ಧಾರಗಳು, ವಿವಿಧ ಹಂತದ ಬದುಕಿನ ಪಾತ್ರಗಳು ಒಂದು ಅತ್ಯುತ್ತಮ ಕಥೆಯಾಗಿ ಮೂಡಿ ಬಂದಿದೆ’ ಎಂದಿದ್ದಾರೆ.
ಈ ಹಿಂದೆ ಉರಿ ಸಿನಿಮಾದಲ್ಲೂ ಮೋದಿಯವರ ಪಾತ್ರವನ್ನು ಅತ್ಯುತ್ತಮ ರೀತಿಯಲ್ಲಿ ಪ್ರಸ್ತುಪಡಿಸಲಾಗಿತ್ತು, ಇದೀಗ ಒಮಂಗ್ ಕುಮಾರ್ ಅವರು ‘ಪಿಎಂ ನರೇಂದ್ರ ಮೋದಿ’ ಎಂಬ ಸಿನಿಮಾವನ್ನು ಮಾಡುತ್ತಿದ್ದಾರೆ, ವಿವೇಕ್ ಒಬೇರಾಯ್ ಮೋದಿಯಾಗಿ ಇಲ್ಲಿ ಮಿಂಚಲಿದ್ದಾರೆ.
Common man to becoming the PM, you know the leader, but do you know the man? #ErosNow announces the most-sought-after biopic #Modi on India’s PM. Witness his life unfold in this original series releasing this April, directed by @umeshkshukla.@RidhimaLulla @PMOIndia @sethimanav pic.twitter.com/EI7JDWWOz3
— Eros Now (@ErosNow) March 13, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.