ನವದೆಹಲಿ: ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗಾಗಿ, ದಿವ್ಯಾಂಗರಿಗಾಗಿ ’ಮನೆಬಾಗಿಲಿಗೆ ಬ್ಯಾಂಕಿಂಗ್’ ಸೇವೆಯನ್ನು ಆರಂಭಿಸಿದೆ. ದೃಷಿ ಹೀನತೆಯ ಸಮಸ್ಯೆಯುಳ್ಳವರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಕೆವೈಸಿ-ಕಾಂಪ್ಲಿಯಂಟ್ ಅಕೌಂಟ್ ಹೊಂದಿದವರು, ಬ್ಯಾಂಕ್ನೊಂದಿಗೆ ಮೊಬೈಲ್ ಫೋನ್ ನೋಂದಣಿ ಮಾಡಿಕೊಂಡಿರುವವರು ಮತ್ತು ಮನೆಯ 5 ಕಿಲೋಮೀಟರ್ ವ್ಯಾಪ್ತಿಯೊಳಗೆ ಬ್ಯಾಂಕ್ ಬ್ರಾಂಚ್ ಹೊಂದಿರುವವರು ಈ ಸೇವೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.
ಕ್ಯಾಶ್ ಪಿಕ್ಅಪ್ ಮತ್ತು ಡೆಲಿವರಿ, ಚೆಕ್ ಪಿಕ್ಅಪ್, ಚೆಕ್ಬುಕ್ ರಿಕ್ವಿಝಿಶನ್ ಸ್ಲಿಪ್ ಪಿಕ್ಅಪ್, ಡ್ರಾಫ್ಟ್ ಡೆಲಿವರಿ, ಟರ್ಮ್ ಡಿಪೋಸಿಟ್ ಅಡ್ವೈಸ್, ಲೈಫ್ ಸರ್ಟಿಫಿಕೇಟ್ ಪಿಕ್ಅಪ್, ಆದಾಯ ತೆರಿಗೆ ಕಾರಣಕ್ಕಾಗಿ ಬಳಸುವ 15H ಫಾರ್ಮ್ ಪಿಕ್ಅಪ್ ಇತ್ಯಾದಿ ಸೇವೆಗಳು ‘ಮನೆಬಾಗಿಲಿಗೆ ಬ್ಯಾಂಕಿಂಗ್’ ಸೇವೆಯಲ್ಲಿ ಸಿಗಲಿದೆ.
ಈ ಸೇವೆಯನ್ನು ಪಡೆಯಲು ತಗಲುವ ವೆಚ್ಚ ಪ್ರತಿ ಪಿನಾನ್ಶಿಯಲ್ ಟ್ರಾನ್ಸಾಕ್ಷನ್ಗೆ ರೂ.100 ಮತ್ತು ನಾನ್-ಪಿನಾನ್ಶಿಯಲ್ ಟ್ರಾನ್ಸಾಕ್ಷನ್ಗೆ ರೂ.60. ಈ ಸೇವೆ ಪಡೆಯಲು ಇಚ್ಛಿಸುವವರು ತಮ್ಮ ಹೋಂ ಬ್ರಾಂಚ್ನಲ್ಲಿ ಇದಕ್ಕಾಗಿ ನೋಂದಣಿಯನ್ನು ಮಾಡಿಕೊಳ್ಳಬೇಕು. ದಿವ್ಯಾಂಗ್ ಕೆಟಗರಿಯಲ್ಲಿ ಈ ಸೇವೆಯನ್ನು ಪಡೆಯಲು ಬಯಸುವವರು ತಮ್ಮ ವೈದ್ಯಕೀಯ ಸರ್ಟಿಫಿಕೇಟ್ನ್ನು ಒದಗಿಸಬೇಕು.
70 ವರ್ಷ ಮೇಲ್ಪಟ್ಟವರನ್ನು ಹಿರಿಯ ನಾಗರಿಕರು ಎಂದು ಪರಿಗಣಿಸಲಾಗುತ್ತದೆ.
ಜಾಯಿಂಟ್ ಅಕೌಂಟ್ ಮತ್ತು ನಾನ್-ಪರ್ಸನಲ್ ಅಕೌಂಟ್ನ್ನು ಹೊಂದಿರುವವರು, ಅಪ್ರಾಪ್ತ ಖಾತೆದಾರರು ಈ ಸೌಲಭ್ಯವನ್ನು ಪಡೆಯಲು ಅರ್ಹರಲ್ಲ.
ದಿವ್ಯಾಂಗ ಮತ್ತು ಹಿರಿಯ ನಾಗರಿಕರ ಅಗತ್ಯತೆ ಪೂರೈಸಲು ಕ್ರಮ ತೆಗೆದುಕೊಳ್ಳುವಂತೆ ಆರ್ಬಿಐ ನೀಡಿದ ನಿರ್ದೇಶನದ ಹಿನ್ನಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಸೌಲಭ್ಯವನ್ನು ಜಾರಿಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.