ತಂಗೇಲ್: ಬಾಂಗ್ಲಾ ಮತ್ತು ಭಾರತದ ನಡುವಿನ ರಕ್ಷಣಾ ಸಹಕಾರದ ಭಾಗವಾಗಿ 2019 ಜಂಟಿ ಸಮರಾಭ್ಯಾಸವನ್ನು ಆಯೋಜನೆಗೊಳಿಸಲಾಗಿದೆ. ಮಾರ್ಚ್ 2ರಿಂದ ಮಾರ್ಚ್ 15ರವರೆಗೆ ಈ ಸಮರಾಭ್ಯಾಸ ಮುಂದುವರಿಯಲಿದೆ. ಭಾರತೀಯ ಸೇನೆಯು ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಸಮರಾಭ್ಯಾಸದ ವಿಡಿಯೋವನ್ನೂ ಹಂಚಿಕೊಂಡಿದ್ದು, ಇದರಲ್ಲಿ ಭಾರತ ಮತ್ತು ಬಾಂಗ್ಲಾ ಸೇನಾಪಡೆಗಳು ಅಭ್ಯಾಸ ನಡೆಸುತ್ತಿರುವ ತುಣುಕುಗಳು ಇವೆ. ಈ ವಿಡಿಯೋದೊಂದಿಗೆ ನಾವು ಜೊತೆ ಜೊತೆಗಿದ್ದೇವೆ. ಉಗ್ರವಾದದ ಸವಾಲನ್ನು ಒಟ್ಟು ಸೇರಿ ಎದುರಿಸುವುದು ಅತ್ಯಂತ ಅವಶ್ಯಕ ಎಂಬ ಸಂದೇಶವನ್ನು ನೀಡಲಾಗಿದೆ.
Ex #Sampriti VIII 2019. The troops of #IndianArmy and #BangladeshArmy practised rappelling.
हम साथ साथ हैं।
आतंकवाद का सामना साथ मिलकर करना अत्यंत आवश्यक है।।#Synergy #UnitedNations @SpokespersonMoD @PIB_India @HQ_IDS_India @indiannavy @IAF_MCC pic.twitter.com/zVprfYZsYW— ADG PI – INDIAN ARMY (@adgpi) March 5, 2019
ಇದು ಸಂಪ್ರೀತಿ ಸಮರಾಭ್ಯಾಸದ 8ನೇ ಆವೃತ್ತಿಯಾಗಿದ್ದು, ಬಾಂಗ್ಲಾದೇಶದ ತಂಗೇಲ್ ಬಂಗಬಂಧು ಕಂಟೋನ್ಮೆಂಟ್ನಲ್ಲಿ ಭಾನುವಾರ ಅಭೂತಪೂರ್ವವಾಗಿ ಆರಂಭಗೊಂಡಿದೆ.
ಬಾಂಗ್ಲಾದೇಶದ 19 ಇನ್ಫೆಂಟ್ರಿ ಡಿವಿಷನ್ ಮೇಜರ್ ಜನರಲ್ ಮಿಜನುರ್ ರೆಹಮಾನ್ ಶಮೀಮ್ ಅವರು ಭಾರತೀಯ ಸೇನಾ ಪಡೆಯನ್ನು ಸ್ವಾಗತಿಸಿದರು. ತಮ್ಮ ಭಾಷಣದಲ್ಲಿ ಅವರು, ಭಾರತ ಮತ್ತು ಬಾಂಗ್ಲಾದೇಶಗಳು ಸಮಾನ ಪ್ರಜಾಪ್ರಭುತ್ವ ಸ್ವಾತಂತ್ರ್ಯ ಸಮಾನತೆ ಮತ್ತು ನ್ಯಾಯವನ್ನು ನ್ಯಾಯದ ನಂಬಿಕೆಗಳನ್ನು ಹಂಚಿಕೊಳ್ಳುತ್ತವೆ ಎಂಬುದನ್ನು ಉಲ್ಲೇಖಿಸಿದರು. ಪರಸ್ಪರ ಸಹಕಾರವನ್ನು ವೃದ್ಧಿಸುವುದು ಈ ಸಮರಾಭ್ಯಾಸದ ಮುಖ್ಯ ಉದ್ದೇಶ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.