ಇಸ್ಲಾಮಾಬಾದ್: ಭಾರತ ಪಾಕಿಸ್ಥಾನದ ವಿರುದ್ಧ ವೈಮಾನಿಕ ದಾಳಿಯನ್ನು ನಡೆಸಿದ ಫೆ.27ರ ಬಳಿಕ ಆ ದೇಶದ ವಾಯುಯಾನವನ್ನು ಸ್ಥಗಿತಗೊಳಿಸರಾಗಿತ್ತು. ಇದರಿಂದಾಗಿ ಆ ದೇಶದ ವಾಯು ವಲಯಕ್ಕೆ ಭಾರೀ ನಷ್ಟವಾಗಿದೆ. 25000 ಮಂದಿ ಸಂಕಷ್ಟಕ್ಕೀಡಾಗಿದ್ದಾರೆ.
ಪ್ರಸ್ತುತ ಉಭಯ ದೇಶಗಳ ನಡುವಣ ಉದ್ವಿಗ್ನ ಪರಿಸ್ಥಿತಿ ಕೊಂಚ ಶಮನವಾಗಿರುವ ಹಿನ್ನಲೆಯಲ್ಲಿ ಪಾಕಿಸ್ಥಾನ ವಿಮಾನ ಹಾರಾಟವನ್ನು ಮರುಆರಂಭ ಮಾಡಿದೆ. ಸಿಯಾಲ್ಕೋಟ್, ಬಹವಲಪುರ್, ರಹೀಂ ಯಾರ್ ಖಾನ್, ಮುಲ್ತಾನ್ ಮತ್ತು ದೇರಾ ಇಸ್ಮಾಯಿಲ್ ಖಾನ್ ವಿಮಾನ ನಿಲ್ದಾಣಗಳಿಂದ ಮಾ.4ರಿಂದ ವಿಮಾನಯಾನ ಮರು ಆರಂಭಗೊಂಡಿದೆ.
ಕಳೆದ ನಾಲ್ಕು ದಿನಗಳಿಂದ ಪಾಕಿಸ್ಥಾನದಲ್ಲಿ ವಿಮಾನಯಾನ ಸ್ಥಗಿತಗೊಂಡಿದ್ದರಿಂದ 400 ವಿಮಾನಗಳು ಮತ್ತು 25000 ಮಂದಿ ತೊಂದರೆಗೆ ಸಿಲುಕಿಕೊಂಡಿದ್ದರು. ಕೆಲವರು ತಮ್ಮ ಪ್ರಯಾಣವನ್ನು ಸ್ಥಗಿತಗೊಳಿಸಿದ್ದರು ಮತ್ತು ಇನ್ನು ಕೆಲವರು ತಮ್ಮ ಪ್ರಯಾಣವನ್ನು ಮುಂದಕ್ಕೆ ಹಾಕಿಕೊಂಡಿದ್ದರು.
ಇದೀಗ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟ ಆರಂಭಗೊಂಡಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.