ಶ್ರೀನಗರ: ಭಾರತದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ಥಾನದ ಹೇಳಿಕೆಯನ್ನು ಭಾರತ ಅಲ್ಲಗೆಳೆದಿದೆ. ಪಾಕಿಸ್ಥಾನದ ದಾಳಿಯಿಂದ ಯಾವುದೇ ಯುದ್ಧ ವಿಮಾನ ಪತನಗೊಂಡಿಲ್ಲ ಎಂದು ಸ್ಪಷ್ಟಡಪಡಿಸಿದೆ.
ಭಾರತದ ಎರಡು ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ, ಒಬ್ಬ ಪೈಲೆಟ್ನ್ನು ಬಂಧಿಸಿದ್ದೇವೆ ಎಂದು ಪಾಕಿಸ್ಥಾನ ಹೇಳಿಕೊಂಡಿತ್ತು. ಭಾರತ ಈ ಹೇಳಿಕೆಯನ್ನು ತಿರಸ್ಕರಿಸಿದ್ದು, ಎಲ್ಲಾ ಪೈಲೆಟ್ಗಳು ಸುರಕ್ಷಿತವಾಗಿದ್ದಾರೆ ಎಂದಿದೆ.
ಜಮ್ಮು ಕಾಶ್ಮೀರದ ಬುದ್ಗಾಂನಲ್ಲಿ ಮಿಗ್ ವಿಮಾನ ಪತನಗೊಂಡಿರುವುದಕ್ಕೂ ಪಾಕಿಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ, ತಾಂತ್ರಿಕ ದೋಷದಿಂದ ಅದು ಪತನಗೊಂಡಿದೆ ಎಂದು ಭಾರತ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ ಪಾಕಿಸ್ಥಾನ ಮಾಧ್ಯಮಗಳು, 2016ರ ವೀಡಿಯೋವೊಂದನ್ನು ಬಳಸಿಕೊಂಡು ಇದು ಇಂದು ಪತನಗೊಂಡಿರುವ ಭಾರತದ ವಿಮಾನ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ.
ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸಿದ್ದ ಪಾಕಿಸ್ಥಾನ ಎಫ್-16 ವಿಮಾನವನ್ನು ಭಾರತ ಹೊಡೆದುರುಳಿಸಿದ್ದು, ಅದರಲ್ಲಿದ್ದ ಪೈಲೆಟ್ ಪ್ಯಾರಾಚೂಟ್ ಮೂಲಕ ಪಾರಾಗಲು ಯತ್ನಿಸಿದ ದೃಶ್ಯ ಸೆರೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.