ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಲಘು ತೂಕದ, ಬಣ್ಣ ಬಣ್ಣದ, ಸುಲಲಿತವಾಗಿ ಬಳಸಬಹುದಾದ ಅಡುಗೆ ಅನಿಲ ನಮ್ಮ ಮನೆಯ ಅಡುಗೆ ಕೋಣೆಯನ್ನು ಪ್ರವೇಶಿಸಲಿದೆ. ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಶೀಘ್ರದಲ್ಲೇ ಹೊಸ ಫೈಬರ್ನಿಂದ ತಯಾರಿಸಲ್ಪಟ್ಟ ಸಿಲಿಂಡರ್ನ್ನು ಹೊರತರಲಿದೆ. ಈಗಾಗಲೇ ಈ ಸಿಲಿಂಡರ್ನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು 2 ಕೆಜಿ, 5 ಕೆಜಿ, 10 ಕೆಜಿ ಭಾರವಿರಲಿದೆ. ಹಲವಾರು ಸುರಕ್ಷತಾ ಕ್ರಮಗಳನ್ನು ಈ ಸಿಲಿಂಡರ್ನಲ್ಲಿ ಅಳವಡಿಸಲಾಗಿದೆ. ಪ್ರಸ್ತುತ ಇರುವ ಸಿಲಿಂಡರ್ಗಳು 14.2 ಕೆಜಿಯಷ್ಟಿವೆ.
ಈ ಹೊಸ ಸಿಲಿಂಡರ್ನ್ನು ಪಡೆಯಲು, ಗ್ರಾಹಕರು ತಮ್ಮ ಹಳೆಯ ಸಿಲಿಂಡರ್ನ್ನು ವಾಪಾಸ್ ನೀಡಬೇಕು ಮತ್ತು ಸುಮಾರು ರೂ. 1 ಸಾವಿರದಷ್ಟು ಹಣವನ್ನು ಹೆಚ್ಚುವರಿಯಾಗಿ ನೀಡಬೇಕಿದೆ.
ಫೈಬರ್ನಿಂದ ನಿರ್ಮಿತ ಸಿಲಿಂಡರ್ ತಯಾರಿಸುವಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್ಗೆ ಪ್ರಸ್ತಾವನೆ ಸಲ್ಲಿಸಿತ್ತು. ಬೆಂಕಿ ಕಾಣಿಸಿಕೊಂಡರೂ ಸ್ಫೋಟವಾಗದ ರೀತಿಯ ಫೈಬರ್ಗ್ಲಾಸ್ ಟೆಕ್ನಾಲಜಿಯನ್ನು ಬಳಸಿ ಇದನ್ನು ತಯಾರಿಸುವಂತೆ ಹೇಳಲಾಗಿತ್ತು.
ಈ ತೈಲ ಕಂಪನಿಯು ಈಗಾಗಲೇ ಪುಣೆ ಮತ್ತು ಅಹ್ಮದಾಬಾದ್ನಲ್ಲಿ ಈ ಮಾದರಿಯ ಸಿಲಿಂಡರ್ನ್ನು ಪ್ರಾಯೋಗಿಕವಾಗಿ ಹಂಚಿಕೆ ಮಾಡಲಾಗಿದೆ, ಕೆರೊಸಿನ್ ಪ್ರೂಫ್, ಯುವಿ ಪ್ರೊಟೆಕ್ಟೆಡ್ನ್ನು ಇದು ಒಳಗೊಂಡಿದೆ. ಅನಿಲದ ಪ್ರಮಾಣ ಎಷ್ಟಿದೆ ಎಂಬುದನ್ನು ಗ್ರಾಹಕರು ಈ ಸಿಲಿಂಡರ್ನಲ್ಲಿ ತಿಳಿದುಕೊಳ್ಳಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.