ನವದೆಹಲಿ: ರಫೆಲ್ ಯುದ್ಧ ವಿಮಾನವನ್ನು ಹಾರಿಸಲು ಭಾರತೀಯ ವಾಯುಸೇನೆಯ ಪೈಲೆಟ್ಗಳಿಗೆ ತರಬೇತಿಯನ್ನು ನೀಡುವ ಸಲುವಾಗಿ ಎಚ್ಎಎಲ್ 4++ ತಲೆಮಾರಿನ ಟ್ರೈನರ್ ಏರ್ಕ್ರಾಫ್ಟ್ನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಆರಂಭಿಸಿದೆ.
ಸೂಪರ್ಸಾನಿಕ್ ಓಮ್ನಿ ಟ್ರೈನರ್ ಏರ್ಕ್ರಾಫ್ಟ್ (SPORT) ಎಂದು ಕರೆಯಲ್ಪಡುವ ಟ್ರೈನರ್ ಏರ್ಕ್ರಾಫ್ಟ್ನ ಅಭಿವೃದ್ಧಿ ಕಾರ್ಯ ಆರಂಭಗೊಂಡಿದ್ದು, ಸ್ಕಾಡ್ರನ್ಸ್ಗಳ ನಿಯೋಜನೆಗೂ ಮುಂಚಿತವಾಗಿ ಪೈಲೆಟ್ಗಳಿಗೆ ಸುಧಾರಿತ ತರಬೇತಿಯನ್ನು ನೀಡುವ ಕಾರ್ಯಗಳನ್ನು ಇವುಗಳು ಮಾಡಲಿವೆ.
ಎಚ್ಎಎಲ್ನ ಡೆಪ್ಯೂಟಿ ಚೀಫ್ ಟೆಸ್ಟ್ ಪೈಲೆಟ್ ಪ್ರಕಾರ, ಈ ಹೊಸ ಏರ್ಕ್ರಾಫ್ಟ್ ಲಘು ಯುದ್ಧ ಪರಿಧಿಯನ್ನು ಆಧರಿಸಿದ್ದು, ತರಬೇತಿ ಮತ್ತು ಯುದ್ಧ ಎರಡಕ್ಕೂ ಇದನ್ನು ಬಳಕೆ ಮಾಡಬಹುದಾಗಿದೆ. ಪ್ರಸ್ತುತ ತರಬೇತಿ ಪ್ರಕ್ರಿಯೆಯಲ್ಲಿ, ಸ್ಕಾಡ್ರನ್ಗಳ ನಿಯೋಜನೆಗೂ ಮುಂಚಿತವಾಗಿ ಭಾರತೀಯ ವಾಯುಸೇನೆಯ ಪೈಲೆಟ್ಗಳು ಪ್ರಾಥಮಿಕ, ಮಾಧ್ಯಮಿಕ ಮತ್ತು ಬಳಿಕ ಸುಧಾರಿತ ತರಬೇತಿಯನ್ನು ಪಡೆದುಕೊಳ್ಳಲಿದ್ದಾರೆ.
ರಫೆಲ್, ಮಿರಾಜ್ 2000ನಂತಹ ಅತ್ಯದ್ಭುತ ಪ್ರದರ್ಶನ ನೀಡುವ ಯುದ್ಧ ವಿಮಾನಗಳು ಹೊಂದಿರುವ ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ(ಎಚ್ಎಂಡಿ), ಲೇಸರ್ ಡೆಸಿಗ್ನೇಶನ್ ಪೋಡ್(ಎಲ್ಡಿಪಿ) ಅಥವಾ ಲೇಸರ್ ಗೈಡೆಡ್ ಕ್ರೂಸ್ ಮಿಸೈಲ್ಗಳು ಪ್ರಸ್ತುತ ಸುಧಾರಿತ ಜೆಟ್ ಟ್ರೈನರ್ಗಳಲ್ಲಿ ಇಲ್ಲ.
ಸೂಪರ್ಸಾನಿಕ್ ಓಮ್ನಿ ಟ್ರೈನರ್ ಏರ್ಕ್ರಾಫ್ಟ್ ಇವುಗಳನ್ನು ಮತ್ತು ಇದಕ್ಕಿಂತಲೂ ಹೆಚ್ಚಿನ ತಂತ್ರಜ್ಞಾನಗಳನ್ನು ಹೊಂದಲಿದೆ. ಈಗಾಗಲೇ ಎಚ್ಎಎಲ್ ಇದಕ್ಕಾಗಿನ ಪ್ರಾಥಮಿಕ ವಿನ್ಯಾಸವನ್ನು ಪೂರ್ಣಗೊಳಿಸಿದೆ ಮತ್ತು ಇದನ್ನು ಅಭಿವೃದ್ಧಿಪಡಿಸುವ ಹಂತದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.