ನವದೆಹಲಿ : ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಎಲ್ಒಸಿಯನ್ನು ದಾಟಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿನ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯನ್ನು ಟಾರ್ಗೆಟ್ ಮಾಡಿ ವೈಮಾನಿಕ ದಾಳಿಯನ್ನು ನಡೆಸಿವೆ ಎಂದು ವರದಿಗಳು ತಿಳಿಸಿವೆ.
ಸರ್ಕಾರಿ ಮೂಲಗಳ ಪ್ರಕಾರ, ಜೈಶೇ ಶಿಬಿರಗಳನ್ನು ಟಾರ್ಗೆಟ್ ಮಾಡಿಕೊಂಡು ದಾಳಿಯನ್ನು ನಡೆಸಲಾಗಿದೆ. ಈ ದಾಳಿಯಿಂದಾದ ಹಾನಿಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿಗಳು ಬಂದಿಲ್ಲ. ಆದರೆ ಎಲ್ಒಸಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಬೆಳಗ್ಗಿನ ಜಾವ 3.30ಕ್ಕೆ ಮಿರಾಜ್ 2000 ಯುದ್ಧ ವಿಮಾನದ ಮೂಲಕ ದಾಳಿಯನ್ನು ನಡೆಸಲಾಗಿದೆ. ಟಾರ್ಗೆಟ್ ಏರಿಯಾದ ಮೇಲೆ 1000 ಕೆಜಿ ಬಾಂಬ್ ಹಾಕಲಾಗಿದೆ ಎನ್ನಲಾಗಿದೆ.
ಎಲ್ಒಸಿಯಾದ್ಯಂತ ಇದ್ದ ಬಲಕೋಟ್, ಚಕೋತಿ, ಮುಜಾಫರ್ಬಾದ್ ಉಗ್ರ ನೆಲೆಗಳು ವೈಮಾನಿಕ ದಾಳಿಯಲ್ಲಿ ಸಂಪೂರ್ಣ ಧ್ವಂಸವಾಗಿವೆ. ಜೈಶೇ ಕಂಟ್ರೋಲ್ ರೂಂ ಕೂಡ ಛಿದ್ರವಾಗಿವೆ ಎನ್ನಲಾಗಿದೆ.
ಇನ್ನು ಈ ಘಟನೆಯನ್ನು ಸ್ವತಃ ಪಾಕಿಸ್ತಾನ ಒಪ್ಪಿಕೊಂಡಿದ್ದು, ಕಳೆದ ರಾತ್ರಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿತ್ತು. ಈ ವೇಳೆ ನಾವು ಎಚ್ಚೇತ್ತು ತಕ್ಷಣೆ ಕಾರ್ಯಾಚರಣೆ ಕೈಗೊಂಡೆವು ಎಂದು ಪಾಕಿಸ್ತಾನ ಹೇಳುತ್ತಿದೆ.
IAF Sources: 12 Mirage 2000 jets took part in the operation that dropped 1000 Kg bombs on terror camps across LOC, completely destroying it pic.twitter.com/BP3kIrboku
— ANI (@ANI) February 26, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.