ನವದೆಹಲಿ: ವಸತಿ ವಲಯಕ್ಕೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲಿನ ಜಿಎಸ್ಟಿಯನ್ನು ಈಗಿರುವ ಶೇ.12 ರಿಂದ ಶೇ.5ಕ್ಕೆ ಇಳಿಕೆ ಮಾಡುವುದಾಗಿ ಫೆ.24ರಂದು ಜಿಎಸ್ಟಿ ಮಂಡಳಿ ಘೋಷಿಸಿದೆ. ಎಪ್ರಿಲ್ 1 ರಿಂದ ಈ ಪರಿಷ್ಕೃತ ಜಿಎಸ್ಟಿ ಅನುಷ್ಠಾನಕ್ಕೆ ಬರಲಿದೆ.
ಇನ್ನೊಂದೆಡೆ, ಕೈಗೆಟಕುವ ವಸತಿ (affordable homes) ಗಳ ಮೇಲಿನ ಜಿಎಸ್ಟಿ ದರವನ್ನು ಶೇ.1 ಕ್ಕೆ ಇಳಿಸಲಾಗಿದೆ. ಪ್ರಸ್ತುತ ಈ ವಸತಿಗಳ ಮೇಲಿನ ಶೇ.8 ರಷ್ಟು ಜಿಎಸ್ಟಿ ಇದೆ. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಇಲ್ಲದೇ ಎರಡೂ ಜಿಎಸ್ಟಿಗಳನ್ನು ಇಳಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಮೆಟ್ರೋ ನಗರಗಳಲ್ಲಿ ಕೈಗೆಟುಕುವ ಮನೆಗಳ ವ್ಯಾಪ್ತಿಯನ್ನು 45 ಲಕ್ಷ ರೂಪಾಯಿ ಬೆಲೆ ಹೊಂದಿರುವ 60 ಚದರ ಮೀಟರ್ ಗಳಿಗೆ ಹಾಗೂ ಇತರ ಪ್ರದೇಶಗಳಲ್ಲಿ 90 ಚದರ ಮೀಟರ್ ಗಳಿಗೆ ವಿಸ್ತರಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಭಾರತದ ಮೆಟ್ರೊಪಾಲಿಟನ್ ನಗರಗಳೆಂದರೆ-ಬೆಂಗಳೂರು, ಚೆನ್ನೈ, ದೆಹಲಿ- NCR (ದೆಹಲಿ, ನೊಯ್ಡಾ, ಗ್ರೇಟರ್ ನೊಯ್ಡಾ, ಘಜಿಯಾಬಾದ್, ಗುರುಗ್ರಾಮ್ ಮತ್ತು ಫರಿದಾಬಾದ್), ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬೈ (ಮುಂಬಯಿ ಮೆಟ್ರೊಪಾಲಿಟನ್ ರೀಜನ್) ಗೆ ಸೇರಿವೆ.
ಜಿಎಸ್ಟಿ ಇಳಿಕೆ ನಿರ್ಧಾರ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಭಾರೀ ಉತ್ತೇಜನವನ್ನು ನೀಡುವ ನಿರೀಕ್ಷೆ ಇದೆ. ಇದುವರೆಗೆ ಜಿಎಸ್ಟಿಯ ಕಾರಣಕ್ಕಾಗಿ ಹಲವಾರು ಮಂದಿ ನಿರ್ಮಾಣಗೊಂಡು ಸಜ್ಜಾಗಿರುವ ಮನೆಗಳನ್ನೇ ಕೊಂಡುಕೊಳ್ಳುವತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರು.
‘ನಾವು ರಿಯಲ್ ಎಸ್ಟೇಟ್ ಸೆಕ್ಟರ್ ಮತ್ತು ಮಧ್ಯಮ ವರ್ಗದ ಮತ್ತು ಮುಂಬರುವ ಮಧ್ಯಮ ವರ್ಗದ ಜನರಿಗೆ ಉತ್ತೇಜನ ನೀಡಲು ಬಯಸಿದ್ದೆವು. ಈ ನಿಟ್ಟಿನಲ್ಲಿ ನಿರ್ಮಾಣ ಹಂತದ ಕಟ್ಟಡಗಳ ಮೇಲಿನ ಜಿಎಸ್ಟಿ ಕಡಿತ ಮಹತ್ವದ ಹೆಜ್ಜೆಯಾಗಿದೆ’ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಪರಿಷ್ಕೃತ ತೆರಿಗೆ ದರಗಳು 2019 ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ, ಜಿಎಸ್ಟಿ ಕಡಿಮೆ ಮಾಡಿರುವುದರಿಂದ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.