ನವದೆಹಲಿ: ದೇಶದ ಮೊತ್ತ ಮೊದಲ ಬುಲೆಟ್ ರೈಲಿಗೆ ಲೋಗೋ ಮತ್ತು ಹೆಸರನ್ನು ಸೂಚಿಸುವ ಅವಕಾಶ ನಾಗರಿಕರಿಗೆ ದೊರೆತಿದೆ. ಬುಲೆಟ್ ರೈಲು ಯೋಜನೆಯ ಜವಾಬ್ದಾರಿ ಹೊತ್ತುಕೊಂಡಿರುವ ‘ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್’ ಬುಲೆಟ್ ರೈಲಿಗೆ ಹೆಸರು ಮತ್ತು ಲೋಗೋವನ್ನು ವಿನ್ಯಾಸಪಡಿಸಿಕೊಡುವವರಿಗೆ ರೂ.50 ಸಾವಿರ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
ದೇಶದ ಮೊದಲ ಬುಲೆಟ್ ರೈಲಿಗೆ 2022ರಲ್ಲಿ ಚಾಲನೆ ದೊರೆಯುವ ನಿರೀಕ್ಷೆ ಇದೆ. ಅಹ್ಮದಾಬಾದ್ ಮತ್ತು ಮುಂಬಯಿ ಮಾರ್ಗದಲ್ಲಿ ಇದು ಸಂಚರಿಸಲಿದೆ.
‘ಬುಲೆಟ್ ರೈಲಿಗೆ ಒಂದು ಐಡೆಂಟಿಟಿ ಮತ್ತು ಜನರ ನಡುವಿನ ಅದರ ಬಾಂಧವ್ಯವನ್ನು ಸಂಪರ್ಕಿಸುವ ಲೋಗೋ ಬೇಕಿದೆ. ಈ ಪ್ರಕ್ರಿಯೆಯಲ್ಲಿ ಜನರ ಭಾಗಿತ್ವವನ್ನು ಪ್ರೇರೇಪಿಸಲು www.mygov.inನಲ್ಲಿ ಆನ್ಲೈನ್ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದೇವೆ. ಇಲ್ಲಿ ಜನರು 2019ರ ಮಾರ್ಚ್ 25ರೊಳಗೆ ತಮ್ಮ ಪ್ರವೇಶಾತಿಯನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ನ ಮುಖ್ಯಸ್ಥರು ಹೇಳಿದ್ದಾರೆ.
ಕಾರ್ಪೋರೇಶನ್ mascot (ಸಾಂಕೇತಿಕವಾಗಿ ಪ್ರತಿನಿಧಿಸುವ ಒಂದು ಚಿತ್ರ)ಗೂ ವಿನ್ಯಾಸಗಳನ್ನು ಆಹ್ವಾನಿಸಿದೆ, ಇದು ಏರ್ ಇಂಡಿಯಾದ ಮಹಾರಾಜ ಅಥವಾ ಭಾರತೀಯ ರೈಲ್ವೇಯ ಹೋಲುವಂತೆ ಬುಲೆಟ್ ರೈಲನ್ನು ಪ್ರತಿನಿಧಿಸಲಿದೆ. ಇದನ್ನು ವಿನ್ಯಾಸಪಡಿಸಿ ವಿಜೇತರಾದವರಿಗೆ ರೂ.1ಲಕ್ಷ ಬಹುಮಾನ ದೊರಕಲಿದೆ. ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ನ ಮೌಲ್ಯ ವ್ಯವಸ್ಥೆಯನ್ನು ದೃಢ ಪ್ರತಿನಿಧಿಸುವ ಮತ್ತು ಸಮರ್ಥವಾಗಿ ಸಂವಾದಿಸುವ ಮಾಸ್ಕಾಟ್ನ್ನು ರಚನೆ ಮಾಡುವಂತೆ ಕೋರಲಾಗಿದೆ.
508.17 ಕಿಲೋಮೀಟರ್ ಉದ್ದದ ಬುಲೆಟ್ ರೈಲು ಕಾರಿಡಾರ್ ಇದಾಗಿದ್ದು, ಇದರ 155.76 ಕಿಲೋಮೀಟರ್ ಮಹಾರಾಷ್ಟ್ರದಲ್ಲಿರಲಿದೆ, 348.04 ಕಿಲೋಮೀಟರ್ ಗುಜರಾತನಲ್ಲಿರಲಿದೆ. ಭಾರತ 75ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವ 2025ರ ಆ.15 ಈ ಯೋಜನೆ ಪೂರ್ಣಗೊಳಿಸಲು ಇರುವ ಡೆಡ್ಲೈನ್ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.