ನವದೆಹಲಿ: 2014ಕ್ಕೂ ಮುಂಚೆ ಸಚಿವಾಲಯಗಳು ಮತ್ತು ವ್ಯಕ್ತಿಗಳ ನಡುವೆ ಭ್ರಷ್ಟಾಚಾರ ಮತ್ತು ವಿಳಂಬಗಳನ್ನು ನಡೆಸಲು ಸ್ಪರ್ಧೆ ನಡೆಯುತ್ತಿತ್ತು, ಆದರೆ ಈಗ ಶೇ.100ರಷ್ಟು ವಿದ್ಯುದೀಕರಣವನ್ನು ಮೊದಲು ಸಾಧಿಸಬೇಕೇ ಅಥವಾ ಶೇ.100ರಷ್ಟು ನೈರ್ಮಲ್ಯವನ್ನು ಮೊದಲು ಸಾಧಿಸಬೇಕೇ ಎಂಬ ಬಗ್ಗೆ ಸ್ಪರ್ಧೆ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಗ್ಲೋಬಲ್ ಬ್ಯುಸಿನೆಸ್ ಸಮಿತ್ನಲ್ಲಿ ಮಾತನಾಡಿದ ಮೋದಿ, ‘ಮೊದಲು ಯಾರು ಹೆಚ್ಚು ಭ್ರಷ್ಟಾಚಾರ ಮಾಡುತ್ತಾರೆ, ಯಾರು ಅತೀ ವೇಗದಲ್ಲಿ ಭ್ರಷ್ಟಾಚಾರ ಮಾಡುತ್ತಾರೆ. ಕಲ್ಲಿದ್ದಲ್ಲಿನ ಹೆಚ್ಚು ಭ್ರಷ್ಟಾಚಾರ ಮಾಡುವುದಾ? ಸ್ಪೆಕ್ಟ್ರಂನಲ್ಲಿ ಹೆಚ್ಚು ಭ್ರಷ್ಟಾಚಾರ ಮಾಡುವುದಾ ಎಂಬಿತ್ಯಾದಿ ಸ್ಪರ್ಧೆ ನಡೆಯುತ್ತಿತ್ತು. ಹೆಚ್ಚು ಹಣ ಸಿಗುವುದು ರಕ್ಷಣಾ ವಲಯದಲ್ಲೋ, ಕಾಮನ್ವೆಲ್ತ್ನಲ್ಲೂ ಎಂಬ ಸ್ಪರ್ಧೆ ನಡೆಯುತ್ತಿತ್ತು’ ಎನ್ನುವ ಮೂಲಕ ಯುಪಿಎ ಸರ್ಕಾರವನ್ನು ಕಿಚಾಯಿಸಿದ್ದಾರೆ.
ತಮ್ಮ ಸರ್ಕಾರದ ಯಶೋಗಾಥೆಯನ್ನು ಹೂಡಿಕೆದಾರರ ಮುಂದೆ ತೆರೆದಿಟ್ಟ ಮೋದಿ, ’ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ನಲ್ಲಿ ಭಾರತದ ರ್ಯಾಂಕಿಂಗ್ 57ಕ್ಕೆ ಏರಿಕೆಯಾಗಿದೆ, 2014ರಲ್ಲಿ ಇದು 76ರಲ್ಲಿ ಇತ್ತು’ ಎಂದಿದ್ದಾರೆ.
ವರ್ಲ್ಡ್ ಟ್ರಾವೆಲ್ ಆಂಡ್ ಟೂರಿಸಂ ಕಾಂಪಿಟಿಟಿವ್ನೆಸ್ ಇಂಡೆಕ್ಸ್’ನಲ್ಲಿ ಭಾರತದ ರ್ಯಾಂಕಿಂಗ್ 2017ರಲ್ಲಿ 40ಕ್ಕೆ ಏರಿಕೆಯಾಗಿದೆ. 2013ರಲ್ಲಿ ಇದು 65ರಲ್ಲಿ ಇತ್ತು’ ಎಂದಿದ್ದಾರೆ.
ತಮ್ಮ ಸರ್ಕಾರದ ಅವಧಿಯಲ್ಲಿ ಭಾರತದ ಪ್ರಗತಿ ದರ ಶೇ.7.4ಕ್ಕೆ ಏರಿಕೆಯಾಗಿದೆ, ಶೇ.4.5ರ ಕಡಿಮೆ ಹಣದುಬ್ಬರವನ್ನು ಕಾಣಲಾಗಿದೆ. ಸರಕು ಮತ್ತು ಸೇವಾ ತೆರಿಗೆಯ ಪರಿಚಯದಿಂದ ಜಿಡಿಪಿಗೆ ಹೆಚ್ಚಳಕ್ಕೆ ಅತ್ಯುತ್ತಮ ಅಡಿಪಾಯ ಹಾಕಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.