ನವದೆಹಲಿ: ಮಹಿಳೆಯರು ಮತ್ತು ಮಕ್ಕಳನ್ನು ಬಳಸಿಕೊಂಡು ಪಾಕಿಸ್ಥಾನ ಮೂಲದ ಉಗ್ರ ಸಂಘಟನೆಗಳು ಭಾರತದೊಳಕ್ಕೆ ಸ್ಪೋಟಕಗಳನ್ನು ಸಾಗಾಣೆ ಮಾಡುತ್ತಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ ಎಂದು ವರದಿಯಾಗಿದೆ.
ಪುಲ್ವಾಮ ದಾಳಿಯಲ್ಲಿ ಬಳಸಲಾದ ಸ್ಪೋಟಕಗಳನ್ನು ಜೈಶೇ ಮೊಹಮ್ಮದ್ ಸಂಘಟನೆ ಮಹಿಳೆಯರು ಮತ್ತು ಮಕ್ಕಳನ್ನು ಬಳಸಿಕೊಂಡು ಭಾರತದೊಳಕ್ಕೆ ನುಗ್ಗಿಸಿತ್ತು ಎನ್ನಲಾಗಿದೆ. ಸ್ಪೋಟಕಗಳನ್ನು ದಾಳಿಗೂ ಕೆಲವು ತಿಂಗಳುಗಳ ಕಾಲ ಮುಂಚಿತವಾಗಿಯೇ ಭಾರತದೊಳಕ್ಕೆ ತರಲಾಗಿತ್ತು, ಆದರೆ ಅವುಗಳನ್ನು ಬಾಂಬ್ನೊಳಗೆ ತುಂಬಿಸುವ ಕಾರ್ಯವನ್ನು ಕೆಲವೇ ದಿನಗಳ ಮುಂಚಿತವಾಗಿ ಮಾಡಲಾಯಿತು ಎನ್ನಲಾಗಿದೆ.
ಸಣ್ಣ ಸಣ್ಣ ಪ್ರಮಾಣದಲ್ಲಿ ಸ್ಪೋಟಕಗಳನ್ನು ಮಹಿಳೆಯರು ಮತ್ತು ಮಕ್ಕಳ ಕೈಯಲ್ಲಿ ಕೊಟ್ಟು ಕಳುಹಿಸಲಾಗುತ್ತದೆ ಎನ್ನಲಾಗಿದೆ. ಪುಲ್ವಾಮ ದಾಳಿಯಲ್ಲಿ ಬಳಸಿದ ಆರ್ಡಿಎಕ್ಸ್ ಮಿಲಿಟರಿ ಎ5 ಗ್ರೇಡ್ನದ್ದಾಗಿದೆ. ಪಾಕಿಸ್ಥಾನ ಸೇನೆಯು ಇದನ್ನು ಜೈಶೇ ಉಗ್ರರಿಗೆ ನೀಡಿದೆ, ಈ ಉಗ್ರರು ತಾವು ನಿಯೋಜನೆಗೊಳಿಸಿದ ಮಹಿಳೆಯರು ಮತ್ತು ಮಕ್ಕಳ ಕೈಯಲ್ಲಿ ಜಮ್ಮು ಕಾಶ್ಮೀರದೊಳಕ್ಕೆ ಇದನ್ನು ಪೂರೈಸಿದ್ದಾರೆ.
ಸಿಲಿಂಡರ್, ಬ್ಯಾಕ್ ಬ್ಯಾಗ್, ಕೋಲಾ ಬ್ಯಾಗ್ಗಳ ಮೂಲಕ ಸ್ಪೋಟಕಗಳನ್ನು ಪುಲ್ವಾಮದ ಟ್ರಾಲ್ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ. ಒಟ್ಟು 300 ಕೆಜಿ ಸ್ಪೋಟಕಗಳನ್ನು ಬಳಸಿ ಈ ದಾಳಿಯನ್ನು ನಡೆಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.