ನವದೆಹಲಿ: ಅವಳಿ ಎಂಜಿನ್ ಕಾರ್ಯಾಚರಣೆಯನ್ನು ಪರಿಚಯಿಸಿರುವ ಭಾರತೀಯ ರೈಲ್ವೇ, ಇದೀಗ ಶೀಘ್ರದಲ್ಲೇ ರಾಜಧಾನಿ ಮತ್ತು ಇತರ ಹವಾನಿಯಂತ್ರಿತ ಎಕ್ಸ್ಪ್ರೆಸ್ ರೈಲುಗಳಿಗೆ ಹೆಚ್ಚುವರಿಯಾಗಿ ಎರಡು ಕೋಚ್ಗಳನ್ನು ಜೋಡಿಸಲು ನಿರ್ಧರಿಸಿದೆ. ಮಾತ್ರವಲ್ಲ ಇವುಗಳ ಪ್ರಯಾಣದ ಅವಧಿಯನ್ನೂ ಕಡಿತಗೊಳಿಸಲು ನಿರ್ಧರಿಸಿದೆ.
ಈ ವ್ಯವಸ್ಥೆಯಿಂದ, ರೈಲಿನ ಏರ್-ಕಂಡೀಷನಿಂಗ್ ಸಿಸ್ಟಮ್ ಅನ್ನು ನಡೆಸಲು ಅಗತ್ಯವಿರುವ ವಿದ್ಯುತ್ ಅನ್ನು ಪ್ರಸ್ತುತ ರೈಲಿಗೆ ಅಳವಡಿಸಲಾದ ಎರಡು ಪವರ್ ಕಾರ್ಗಳ ಬದಲಾಗಿ, ಓವರ್ ಹೆಡ್ ಕೇಬಲ್ನಿಂದ ಪಡೆಯಲು ಸಾಧ್ಯವಾಗುತ್ತದೆ. ಇದು ರೈಲ್ವೆಗೆ ಇನ್ನೂ ಎರಡು 3 ಟೈಯರ್ ಎಸಿ ಕೋಚ್ಗಳನ್ನು ರೈಲುಗೆ ಜೋಡಿಸಲು ಅನುವು ಮಾಡಿಕೊಡುತ್ತದೆ. ಮಾತ್ರವಲ್ಲ ಹೆಚ್ಚುವರಿಯಾಗಿ 100 ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಪ್ರಸಕ್ತ, ರಾಜಧಾನಿ ಎಕ್ಸ್ಪ್ರೆಸ್ 22 ಕೋಚ್ಗಳನ್ನು ಹೊಂದಿದ್ದು, 1,200 ಪ್ರಯಾಣಿಕರನ್ನು ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ.
ಭಾರತೀಯ ರೈಲ್ವೆಯ ಸಂಶೋಧನಾ, ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ ಫೆಬ್ರವರಿ 7 ರಂದು ಎಕ್ಸ್ಪ್ರೆಸ್ ರೈಲುಗಳಲ್ಲಿ ಅವಳಿ-ಎಂಜಿನ್ ಕಾರ್ಯಾಚರಣೆಯನ್ನು ಪ್ರಮಾಣೀಕರಿಸಿತು. ಫೆಬ್ರವರಿ 13 ರಂದು ಅವಳಿ ಎಂಜಿನ್ಯೊಂದಿಗಿನ ಮೊದಲ ವಾಣಿಜ್ಯ ಪ್ರಯಾಣ ಮುಂಬೈ-ದೆಹಲಿ ರಾಜಧಾನಿ ರೈಲಿನಲ್ಲಿ ನಡೆಯಿತು. ಇದು ಸಾಮಾನ್ಯಕ್ಕಿಂತ 106 ನಿಮಿಷಗಳ ಪ್ರಯಾಣವನ್ನು ಉಳಿಸಿತು. ಸುಮಾರು 1,543 ಕಿ.ಮೀ. 17 ಗಂಟೆಯಲ್ಲಿ ಮುಗಿಸಿತು. ಈ ಮೂಲಕ ಎರಡು ಗಂಟೆಯನ್ನು ಉಳಿತಾಯ ಮಾಡಿತು. ಇನ್ನೂ ಒಂದಿಷ್ಟು ಸಣ್ಣ ಬದಲಾವಣೆಗಳನ್ನು ಮಾಡಿದರೆ ಇನ್ನೂ 10 ನಿಮಿಷಗಳನ್ನು ಉಳಿತಾಯ ಮಾಡಬಹುದು ಎಂದು ರೈಲ್ವೆಗಳ ಆಂತರಿಕ ವರದಿಯು ಹೇಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.