ನವದೆಹಲಿ: ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ದೇಶವನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಸೇರಿದಂತೆ ಇತರ ಕಾಂಗ್ರೆಸ್ ಟೀಕಾಕಾರರು ಆರೋಪಿಸುತ್ತಲೇ ಇದ್ದಾರೆ. ಆದರೀಗ ಸ್ವತಃ ಕಾಂಗ್ರೆಸ್ ಪಕ್ಷವೇ ತಾನು 70 ವರ್ಷಗಳ ಕಾಲ ಲೂಟಿ ಮಾಡಿದ್ದೇನೆ ಎಂಬುದನ್ನು ಒಪ್ಪಿಕೊಂಡಿದೆ!
ಗುಜರಾತ್ ಕಾಂಗ್ರೆಸ್ ಘಟಕದ ವೆಬ್ಸೈಟ್ನಲ್ಲಿ ಕಾಂಗ್ರೆಸ್ನ್ನು ’70 ವರ್ಷಗಳ ಕಾಲ ದೇಶವನ್ನು ಲೂಟಿ ಮಾಡಿದ ಅತೀದೊಡ್ಡ ಮತ್ತು ಅತೀ ಹಿರಿಯ ಪಕ್ಷ’ ಎಂದು ವಿಶ್ಲೇಷಿಸಲಾಗಿದ್ದು, ಇದು ಕಾಂಗ್ರೆಸ್ನ್ನು ತೀವ್ರ ಮುಜಗರಕ್ಕೀಡು ಮಾಡಿದೆ.
ವೆಬ್ಸೈಟ್ನ ಜಾಯಿನ್ ಅಸ್ ಸೆಕ್ಷನ್ನಲ್ಲಿ, ‘ಬನ್ನಿ, 70 ವರ್ಷಗಳ ಕಾಲ ದೇಶವನ್ನು ಲೂಟಿ ಮಾಡಿದ ಅತೀದೊಡ್ಡ ಪಕ್ಷದ ಭಾಗವಾಗಿ’ ಎಂದು ಬರೆಯಲಾಗಿದೆ. ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಕೊಲೆಗಡುಕರ ನೈಸರ್ಗಿಕ ಪಕ್ಷವಾಗಿ, ರಾಷ್ಟ್ರವಿರೋಧಿಗಳ ಪಕ್ಷವಾಗಿ ಹೊರಹೊಮ್ಮಿದೆ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ.
ಗಮನಕ್ಕೆ ಬಂದ ತಕ್ಷಣವೇ ಕಾಂಗ್ರೆಸ್ ತನ್ನ ವೆಬ್ಸೈಟ್ನಲ್ಲಿನ ಈ ತಪ್ಪನ್ನು ಸರಿಪಡಿಸಿಕೊಂಡಿದೆ. ಆದರೆ ಈ ತಪ್ಪಿಗೆ ಕಾರಣವೇನು ಎಂಬ ಬಗ್ಗೆ ಪಕ್ಷ ಇನ್ನೂ ಸ್ಪಷ್ಟನೆಯನ್ನು ನೀಡಿಲ್ಲ.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಈ ರೀತಿಯ ಸನ್ನಿವೇಶ ಸೃಷ್ಟಿಯಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಸ್ವರೂಪದ ಮುಜುಗರವನ್ನು ಉಂಟು ಮಾಡಿದೆ.
ಕಾಂಗ್ರೆಸ್ 70 ವರ್ಷಗಳ ಕಾಲ ದೇಶವನ್ನು ಲೂಟಿ ಮಾಡಿದೆ ಎಂದು ಆರೋಪಿಸುತ್ತಲೇ ಬಂದಿರುವ ಬಿಜೆಪಿ ಕೈಗೆ ಕಾಂಗ್ರೆಸ್ ಈಗ ಈ ಆರೋಪವನ್ನು ಇನ್ನಷ್ಟು ತೀಕ್ಷ್ಣಗೊಳಿಸಲು ಪ್ರಬಲ ಅಸ್ತ್ರವನ್ನು ನೀಡಿದೆ.
The official website of the Congress party’s Gujarat unit described it as the “oldest and largest political party in India who looted India for 70 years.”https://t.co/PMLXLw892p
— TIMES NOW (@TimesNow) February 20, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.