ಬೆಂಗಳೂರು: ಲಘುಯುದ್ಧ ವಿಮಾನ ತೇಜಸ್ ಕಾರ್ಯಾಚರಣೆಗೆ ಸಿದ್ಧವಾಗಿದೆ. ತೇಜಸ್ನ ಅಧಿಕೃತ ಬಳಕೆಗೆ ಡಿಆರ್ಡಿಓ(Defence Research and Development Organisation) ಭಾರತೀಯ ವಾಯುಸೇನೆಗೆ ಫೈನಲ್ ಆಪರೇಶನಲ್ ಕ್ಲಿಯರೆನ್ಸ್(ಎಫ್ಒಸಿ) ಸ್ಟ್ಯಾಂಡರ್ಡ್ ಸರ್ಟಿಫಿಕೇಟ್ನ್ನು ನೀಡಿದೆ.
ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ನಿರ್ಮಿತ ತೇಜಸ್ ಯುದ್ಧ ವಿಮಾನ ಕಾರ್ಯಾಚರಣೆಗೆ ಸಂಪೂರ್ಣ ಸಿದ್ಧವಾಗಿದೆ ಎಂಬುದನ್ನು ಡಿಆರ್ಡಿಓದ ಎಫ್ಒಸಿ ಸೂಚಿಸುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಯುಸೇನೆಯ ಏರ್ ಚೀಫ್ ಮಾರ್ಷಲ್ ಬಿ.ಎಸ್ ಧನೋವಾ ಅವರು, ‘ಇದು ನಮಗೆ ಮಹತ್ವದ ಮೈಲಿಗಲ್ಲು. ತೇಜಸ್ ಗಗನ್ಶಕ್ತಿ 2018 ಮತ್ತು ವಾಯುಶಕ್ತಿಯಲ್ಲಿ ಇತ್ತೀಚಿಗೆ ಪಾಲ್ಗೊಂಡಿದೆ. ಅತ್ಯುನ್ನತ ಎತ್ತರದಲ್ಲೂ ಅದು ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ, ಈಗಾಗಲೇ ನಮ್ಮ ಬಳಿ ತೇಜಸ್ ಎಂಕೆ.1 ಇದೆ. ಈಗ ನಮಗೆ ತೇಜಸ್ ಎಂಕೆ.2’ ಅಗತ್ಯವಿದೆ ಎಂದಿದ್ದಾರೆ.
ಕಳೆದ ಜನವರಿ 4ರಂದು, ಶಸ್ತ್ರಸಜ್ಜಿತ ತೇಜಸ್ ಯುದ್ಧವಿಮಾನವನ್ನು ನಿರ್ಮಾಣ ಮಾಡಲು ಎಚ್ಎಎಲ್ಗೆ ಅನುಮತಿಯನ್ನು ನೀಡಲಾಗಿದೆ. ಇಂತಹ ಮೊದಲ ವಿಮಾನ ಈ ವರ್ಷವೇ ನಿರ್ಮಾಣಗೊಳ್ಳುವ ನಿರೀಕ್ಷೆ ಇದೆ.
ಫೈನಲ್ ಆಪರೇಶನಲ್ ಕ್ಲಿಯರೆನ್ಸ್ (ಎಫ್ಒಸಿ) ಸಂರಚನೆಯಡಿಯಲ್ಲಿ ತೇಜಸ್ ಎಂಕೆ.1 ಉತ್ಪಾದನೆಯನ್ನು ಪ್ರಾರಂಭಿಸಲು ಸೇನಾ ವಾಯುಯಾನ ಮತ್ತು ಸರ್ಟಿಫಿಕೇಶನ್ (ಸಿಇಎಂಐಎಲ್ಸಿ) ಕೇಂದ್ರವು ಸಮ್ಮತಿ ನೀಡಿದೆ.
ಅಂತಿಮ ಕಾರ್ಯಾಚರಣೆ ಕ್ಲಿಯರೆನ್ಸ್ ಅನ್ನು ಪಡೆಯಲು, ವಿಮಾನವು ಹಾರಾಟದ ಮಧ್ಯ ಇಂಧನ ತುಂಬಿಸುವ ಯುದ್ಧ-ಸಮಯ ಸಾಮರ್ಥ್ಯಗಳನ್ನು ಹೊಂದಿರಬೇಕು, ಎಇಎಸ್ಎ ರ್ಯಾಡಾರ್, ವಿದ್ಯುನ್ಮಾನ ಯುದ್ಧ ವಲಯಗಳು, ವಿವಿಧ ಬಾಂಬ್ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಒಳಗೊಂಡಿರಬೇಕು.
ಸೆಮಿಲಾಕ್, ಮಿಲಿಟರಿ ವಿಮಾನ ಮತ್ತು ವಾಯುಗಾಮಿ ವ್ಯವಸ್ಥೆಯನ್ನು ದೃಢೀಕರಣಗೊಳಿಸುವ ಡಿಆರ್ಡಿಓದ ಅಧಿಕೃತ ಪ್ರಯೋಗಾಲಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.