ನವದೆಹಲಿ: ಭವಿಷ್ಯದ ಸುರಕ್ಷತೆಗಾಗಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಭಾರತ ಸೇರಿದಂತೆ ಇತರ ರಾಷ್ಟ್ರಗಳೊಂದಿಗೆ ಕೈಜೋಡಿಸುತ್ತೇವೆ ಎಂದು ಭಾರತ ಪ್ರವಾಸದಲ್ಲಿರುವ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಭರವಸೆಯನ್ನು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ ಬಳಿಕ ಜಂಟಿ ಹೇಳಿಕೆ ನೀಡಿದ ಅವರು, ‘ಉಗ್ರಗಾಮಿತ್ವ ಮತ್ತು ತೀವ್ರಗಾಮಿತ್ವ ಎಲ್ಲರಿಗೂ ದೊಡ್ಡ ಬೆದರಿಕೆಯಾಗಿದ್ದು, ಇದನ್ನು ಹತ್ತಿಕ್ಕಲು ಭಾರತಕ್ಕೆ ಸಹಕಾರ ನೀಡಿಯೇ ನೀಡುತ್ತೇವೆ. ಉಗ್ರರ ವಿರುದ್ಧ ಭಾರತ ತಳೆದಿರುವ ಕಠಿಣ ನಿಲುವನ್ನು ನಾವು ಶ್ಲಾಘಿಸುತ್ತೇವೆ’ ಎಂದಿದ್ದಾರೆ.
ಗುಪ್ತಚರ ಮಾಹಿತಿ ವಿನಿಯೋಗದ ಮೂಲಕ ಭಾರತಕ್ಕೆ ನೆರವು ನೀಡಲು ಸಿದ್ಧರಿದ್ದೇವೆ ಎಂದಿದ್ದಾರೆ.
ಬಳಿಕ ಮಾತನಾಡಿದ ಮೋದಿ, ‘ಯಾವ ವಿಧಾನದಲ್ಲೂ ಭಯೋತ್ಪಾದನೆಯನ್ನು ಬೆಂಬಲಿಸಬಾರದು ಎಂದು ಪರಸ್ಪರ ಸಮ್ಮತಿಸಿದ್ದೇವೆ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವವರ ಮೇಲೆ ಒತ್ತಡ ಹೇರುವ ನಿರ್ಧಾರ ತೆಗೆದುಕೊಂಡಿದ್ದೇವೆ. ಉಗ್ರರ ಮೂಲಸೌಕರ್ಯ ನಾಶ, ಉಗ್ರ ಸಂಘಟನೆಗಳ ಬೆಂಬಲ ಸ್ಥಗಿತ, ಅವರ ವಿರುದ್ಧ ಕಠಿಣ ಕ್ರಮ ಈಗ ನಾವು ತುರ್ತಾಗಿ ಮಾಡಬೇಕಾದ ಕಾರ್ಯ. ಭಾರತಕ್ಕೆ ಈ ಬಗ್ಗೆ ಬೆಂಬಲ ಸೂಚಿಸಿದ ಸೌದಿ ಧನ್ಯವಾದಗಳು’ ಎಂದಿದ್ದಾರೆ.
ಪಾಕಿಸ್ಥಾನಕ್ಕೆ ಹೋಗಿ ಧನ ಸಹಾಯ ಮಾಡಿದ ಬಗ್ಗೆ ಆರೋಪ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಅವರು, ಭಾರತ ಮತ್ತು ಸೌದಿ ಅರೇಬಿಯಾದ ನಡುವಣ ಸಂಬಂಧ ಡಿಎನ್ಎನಲ್ಲೇ ಇದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.