ಚಂಡೀಗಢ: ಪುಲ್ವಾಮ ದಾಳಿಯ ವಿಷಯದಲ್ಲಿ ಪಾಕಿಸ್ಥಾನಕ್ಕೆ ಬೆಂಬಲ ನೀಡಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿರುದ್ಧ ದೇಶದಾದ್ಯಂತ ಭಾರೀ ಆಕ್ರೋಶಗಳು ವ್ಯಕ್ತವಾಗಿವೆ, ಇದೇ ಕಾರಣದಿಂದ ಅವರನ್ನು ಖ್ಯಾತ ‘ದಿ ಕಪಿಲ್ ಶರ್ಮಾ ಶೋ’ದಿಂದಲೂ ಕಿತ್ತೊಗೆಯಲಾಗಿದೆ. ಇದೀಗ ಅವರನ್ನು ಸಚಿವ ಸ್ಥಾನದಿಂದಲೂ ಕೆಳಗಿಳಿಸಬೇಕು ಎಂಬ ಒತ್ತಾಯಗಳು ಬಹುವಾಗಿ ಕೇಳಿ ಬರುತ್ತಿವೆ.
ಸೋಮವಾರ ಪಂಜಾಬ್ ವಿಧಾನಸಭೆಯಲ್ಲಿ ಸಿಧು ಅವರನ್ನು ಕೆಳಗಿಳಿಸುವಂತೆ ದೊಡ್ಡ ಹೋರಾಟವೇ ನಡೆದಿದೆ. ಪ್ರತಿಪಕ್ಷಗಳ ಸದಸ್ಯರಗಳು ಕೂಡಲೇ ಸಿಧು ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ತನ್ನ ಹೇಳಿಕೆಗೆ ಸಿಧೂ ಸಮಜಾಯಿಷಿ ನೀಡಲು ಮುಂದಾದರೂ, ಎಲ್ಲರೂ ಅವರನ್ನು ಟಾರ್ಗೆಟ್ ಮಾಡಿದ ಪರಿಣಾಮ ಸಮ್ಮನೆ ಕುಳಿತುಕೊಳ್ಳಬೇಕಾಯಿತು.
ಇಡೀ ದೇಶ ಒಂದಾಗಿ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ಥಾನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತಿದ್ದರೆ, ಅತ್ತ ಸಿಧು ಪಾಕಿಸ್ಥಾನಕ್ಕೆ ಕ್ಲೀನ್ಚಿಟ್ ನೀಡುವ ಮಾತನ್ನಾಡಿದ್ದರು. ಇದು ಭಾರತೀಯರನ್ನು ಘಾಸಿಗೊಳಿಸಿತ್ತು.
ಅಲ್ಲದೇ ಅವರು ಹುತಾತ್ಮ ಯೋಧನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.