ಪೋಖ್ರಾನ್: ರಾಜಸ್ಥಾನದ ಜೈಸಲ್ಮೇರ್ನ ಪೋಖ್ರಾನ್ ಏರ್ ಟು ಗ್ರೌಂಡ್ ಆರ್ಮಮೆಂಟ್ ರೇಂಜ್ನಲ್ಲಿ ಶನಿವಾರ ಭಾರತೀಯ ವಾಯುಸೇನೆಯ ‘ವಾಯುಶಕ್ತಿ 2019’ ಆರಂಭಗೊಂಡಿದೆ. ತನ್ನ ಯುದ್ಧ ಕೌಶಲಗಳನ್ನು ವಾಯುಸೇನೆ ಇಲ್ಲಿ ಪ್ರದರ್ಶಿಸಲಿದೆ.
ವಿವಿಧ ಮಾದರಿಯ ಯುದ್ಧವಿಮಾನಗಳು, ಹೆಲಿಕಾಫ್ಟರ್ಗಳು, ರಿಮೋಟ್ ಚಾಲಿತ ವಾಹಕಗಳು, ಯುದ್ಧ ಪರಿಕರಗಳು ಈ ಸಮರಾಭ್ಯಾಸದಲ್ಲಿ ಪ್ರದರ್ಶನಗೊಳ್ಳಲಿವೆ. ವಾಯುಸೇನೆಯ ವಾಯು ಯೋಧರ ಸಾಮರ್ಥ್ಯ ಮತ್ತು ಅತ್ಯದ್ಭುತ ಯಂತ್ರಗಳ ಕೌಶಲಗಳು ಇಲ್ಲಿ ಅನಾವರಣಗೊಳ್ಳಲಿದೆ.
ಏಷ್ಯಾದ ಅತ್ಯುನ್ನತ ಫೈಟರ್ ಜೆಟ್ ಸು-30ಎಂಕೆಐ ಈ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದು, ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಇದೇ ಮೊದಲ ಬಾರಿಗೆ, 4ನೇ ತಲೆಮಾರಿನ ಏರ್ ಸುಪಿರಿಯಾರಿಟಿ ಫೈಟರ್ ಏರ್ಕ್ರಾಫ್ಟ್ ಮಿಗ್-29 ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿಲಿದೆ. ಮಿಗ್ 21, ಮಿರಾಜ್-2000, ಎಎನ್-32ಗಳು ಕೂಡ ಇದರಲ್ಲಿ ಭಾಗಿಯಾಗುತ್ತಿದೆ.
ಐಎಎಫ್ ತನ್ನ 2019 ಸಮರಾಭ್ಯಾಸದಲ್ಲಿ ವಾಯುಸೇನೆ ತನ್ನ ಎಲ್ಲಾ ಋತು, ಎಲ್ಲಾ-ಹವಾಮಾನ ದಿನ-ಮಧ್ಯಾಹ್ನ-ರಾತ್ರಿ ಕಾರ್ಯಾಚರಣೆಗಳನ್ನು ಪ್ರದರ್ಶಿಸಲಿದೆ.
“ಭಾರತೀಯ ವಾಯುಪಡೆಯ 7ನೇ ಆವೃತ್ತಿಯ ಫೈರ್ ಪವರ್ ಡೆಮೊನ್ಸ್ಟ್ರೇಶನ್ (ಎಫ್ ಪಿ ಡಿ) ರಾಜಸ್ಥಾನದ ಪೋಖ್ರಾನ್ ವ್ಯಾಪ್ತಿಯಲ್ಲಿ ಫೆಬ್ರುವರಿ 16ರಂದು ಎಲ್ಲಾ ಹವಾಮಾನದ ದಿನ ಮತ್ತು ರಾತ್ರಿ ಕಾರ್ಯಾಚರಣೆಗಳನ್ನು ಪ್ರದರ್ಶಿಸಲಿದೆ” ಎಂದು ಐಎಎಫ್ ಟ್ವೀಟ್ ಮೂಲಕ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.