ನವದೆಹಲಿ: ಆಯುಷ್ ಕೇಂದ್ರ ಸಚಿವಾಲಯವು ಇಂದು ‘ಇ-ಔಷಧಿ’ ವೆಬ್ಸೈಟ್ನ್ನು ಅನಾವರಣಗೊಳಿಸಿದ್ದು, ಇದರ ಮೂಲಕ ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪಥಿ ಔಷಧಿ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಪರವಾನಗಿಯನ್ನು ಪಡೆದುಕೊಳ್ಳಬಹುದಾಗಿದೆ.
ದೇಶದ ಆಯುಷ್ ಔಷಧಿ ಪರಿಸರಗಳಲ್ಲಿ ಪಾರದರ್ಶಕತೆಯನ್ನು ತರಲು, ಮಾಹಿತಿ ನಿರ್ವಹಣಾ ಸೌಲಭ್ಯವನ್ನು ಸುಧಾರಿಸಲು, ಡಾಟಾ ಬಳಕೆಯನ್ನು ಸುಧಾರಣೆಗೊಳಿಸಲು ಮತ್ತು ನಿಖರತೆಯನ್ನು ವೃದ್ಧಿಸುವ ಉದ್ದೇಶದೊಂದಿಗೆ ಸಚಿವಾಲಯ ಈ ಪೋರ್ಟಲ್ನ್ನು ಆರಂಭಿಸಿದೆ.
ಈ ಪೋರ್ಟಲ್ ಮೂಲಕ ಅರ್ಜಿಯನ್ನು ಹಾಕಿ ಪರವಾನಗಿಯನ್ನು ಪಡೆದುಕೊಳ್ಳಬಹುದಾಗಿದೆ, ಇದಕ್ಕಾಗಿ ಸಮಯ ನಿಗದಿಪಡಿಸುವುದಾಗಿ ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಹೇಳಿದ್ದಾರೆ. ಅಲ್ಲದೇ ಪ್ರಕ್ರಿಯೆಗಳ ಮಾಹಿತಿಯನ್ನು ಎಸ್ಎಂಎಸ್, ಇಮೇಲ್ಗಳ ಮೂಲಕ ಪ್ರತಿ ಹಂತದಲ್ಲೂ ಕಳುಹಿಸಿಕೊಡಲಾಗುವುದು ಎಂದಿದ್ದಾರೆ.
ಸುಲಲಿತ ಉದ್ಯಮ, ಮೇಕ್ ಇನ್ ಇಂಡಿಯಾ, ಇ-ಗವರ್ನೆನ್ಸ್ಗೆ ಸರ್ಕಾರದ ಬದ್ಧತೆಯನ್ನು ಈ ಪೋರ್ಟಲ್ ತೋರಿಸಿಕೊಟ್ಟಿದೆ ಎಂದು ಸಚಿವರು ಹೇಳಿದ್ದಾರೆ.
ಕೇರಳದ ತಿರುವನಂತಪುರಂನಲ್ಲಿ ಫೆ.15ರಿಂದ ಫೆ.19ರವರೆಗೆ ಆಯುಷ್ನ ಅಂತಾರಾಷ್ಟ್ರೀಯ ಸಮಾವೇಶ ಜರುಗಲಿದ್ದು, ಇದರ ಮೂಲಕ ವಿಶ್ವಕ್ಕೆ ಭಾರತೀಯ ಔಷಧ ಪದ್ಧತಿಗಳನ್ನು ಪರಿಚಯಿಸಿಕೊಡಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.