ನವದೆಹಲಿ: ಭಾರತ ಚಿತ್ರರಂಗದ ಖ್ಯಾತ ತಾರೆ ಮಧುಬಾಲಾ ಅವರ 86ನೇ ಹುಟ್ಟುಹಬ್ಬದ ಪ್ರಯುಕ್ತ ಗೂಗಲ್ ನವೀನ ವಿನ್ಯಾಸದ ಡೂಡಲ್ನ್ನು ರಚಿಸಿದೆ. ಈ ಡೂಡಲ್ನಲ್ಲಿ ಮಧುಬಾಲಾ ಅವರ ಚಿತ್ರವನ್ನು ರಚಿಸಿದೆ.
ಸ್ಲಂ ಪ್ರದೇಶದಲ್ಲಿ ಹುಟ್ಟಿದ್ದ ಮಧುಬಾಲಾ, ಬಾಲನಟಿಯಾಗಿ ತಮ್ಮ ಕುಟುಂಬಕ್ಕೆ ಆರ್ಥಿಕ ಆಸರೆಯಾಗಿದ್ದರು. ಬಳಿಕ ಬಾಲಿವುಡ್ನ ಅಗ್ರಗಣ್ಯ ನಟಿಯಾಗಿ ಮೆರೆದು ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತಮ್ಮ ಸೌಂದರ್ಯ, ನಟನಾ ಕೌಶಲ್ಯಗಳಿಂದ ಅವರು ಮನೆಮಾತಾಗಿದ್ದರು.
1933ರಲ್ಲಿ ಮುಂಬಯಿಯಲ್ಲಿ ಮುಮ್ತಾಝ್ ಜಹಾನ್ ಬೇಗಂ ದೆಹ್ಲಾವಿ ಆಗಿ ಜನಿಸಿದ ಅವರು, 9ನೇ ವಯಸ್ಸಿಗೆ ಚಿತ್ರರಂಗಗಳಲ್ಲಿ ನಟಿಸಲು ಆರಂಭಿಸಿದ್ದರು. 14ನೇ ವಯಸ್ಸಲ್ಲಿ ನೀಲ್ ಕಮಲ್ ಸಿನಿಮಾದಲ್ಲಿ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಅವರ ಹೆಸರು ಮಧುಬಾಲಾ ಆಗಿ ಪರಿವರ್ತನೆಗೊಂಡಿತು. ಪೋಷಕರು ಮತ್ತು ನಾಲ್ವರು ಸಹೋದರಿಯರಿಗೆ ಇವರ ದುಡಿಮೆಯೇ ಜೀವನಾಧಾರವಾಗಿತ್ತು.
2008ರಲ್ಲಿ ಇವರ ಸ್ಮರಣಾಥ್ ಅಂಚೆಚೀಟಿಯನ್ನೂ ಬಿಡುಗಡೆಗೊಳಿಸಲಾಗಿದೆ. 1952ರಲ್ಲಿ ಥಿಯೇಟರ್ ಟಾಕ್ಸ್ ಮ್ಯಾಗಜೀನ್ ಇವರಿಗೆ ‘ವಿಶ್ವದ ಅತೀದೊಡ್ಡ ತಾರೆ’ ಎಂಬ ಬಿರುದನ್ನು ನೀಡಿತ್ತು.
ಇಂದು ಅವರ 86ನೇ ಜನ್ಮದಿನವಾಗಿದ್ದು, ಮಧುಬಾಲಾ ಅವರು ನೃತ್ಯ ಮಾಡುತ್ತಿರುವ ಭಂಗಿಯಲ್ಲಿ ಡೂಡಲ್ನ್ನು ರಚನೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.