ನವದೆಹಲಿ: ಸುಮಾರು 700 ಕೋಟಿ ರೂಪಾಯಿಗಳನ್ನು ನೀಡಿ ಅಮೇರಿಕಾದ ಸಂಸ್ಥೆಯಿಂದ ಒಂದು ವರ್ಷದೊಳಗೆ 72,400 ಅಸಾಲ್ಟ್ ರೈಫಲ್ಗಳನ್ನು ಖರೀದಿ ಮಾಡುವ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ.
ಈ ರೈಫಲ್ಗಳನ್ನು, ಅಮೇರಿಕಾದ ರಕ್ಷಣಾ ಪಡೆಗಳು ಸೇರಿದಂತೆ ಕೆಲ ಯುರೋಪಿಯನ್ ಪಡೆಗಳು ಬಳಕೆ ಮಾಡುತ್ತಿವೆ. ಇವುಗಳನ್ನು ಭಾರತ ತ್ವರಿತ ನೇಮಕಾತಿ ಪ್ರಕ್ರಿಯೆ(fast track procurement) ಅಡಿಯಲ್ಲಿ ಖರೀದಿ ಮಾಡಲು ನಿರ್ಧರಿಸಿದೆ.
‘ಭಾರತ ಸಿಗ್ ಸಾರ್ ಅಸಾಲ್ಟ್ ರೈಫಲ್ಗಳನ್ನು ಫಾಸ್ಟ್ ಟ್ರ್ಯಾಕ್ ಪ್ರೊಕ್ರುಮೆಂಟ್ ಪ್ರಕ್ರಿಯೆಯಡಿ ಅಮೇರಿಕಾದಿಂದ ಖರೀದಿ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಈ ಒಪ್ಪಂದದ ಭಾಗವಾಗಿ, ಭಾರತ 7.62 ಎಂಎಂಗಳ 72,400 ರೈಫಲ್ಗಳನ್ನು ಅಮೆರಿಕಾದ ಸಂಸ್ಥೆ ಸಿಗ್ ಸಾರ್ನಿಂದ ಇನ್ನು ಒಂದು ವರ್ಷದೊಳಗೆ ಪಡೆದುಕೊಳ್ಳಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 700 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರೈಫಲ್ಗಳನ್ನು ಭಾರತ ಖರೀದಿ ಮಾಡುತ್ತಿದೆ.
ಪ್ರಸ್ತುತ ಭಾರತೀಯ ಶಸ್ತ್ರಾಸ್ತ್ರ ಪಡೆಗಳು 5.56×45 ಎಂಎಂ ಐಎಸ್ಎಸ್ಎಎಸ್ ರೈಫಲ್ಗಳನ್ನು ಹೊಂದಿದೆ. ಈ ರೈಫಲ್ಗಳನ್ನು ತ್ವರಿತವಾಗಿ 7.62×51 ಎಂಎಂ ಅಸಾಲ್ಟ್ ರೈಫಲ್ಗಳ ಮೂಲಕ ರಿಪ್ಲೇಸ್ ಮಾಡುವ ಅಗತ್ಯವಿದೆ. ಈ ಅಸಾಲ್ಟ್ ರೈಫಲ್ ಅತ್ಯಂತ ದೃಢ, ಆಧುನಿಕ ತಂತ್ರಜ್ಞಾನ ಮತ್ತು ಕ್ಷೇತ್ರ ಪರಿಸ್ಥಿತಿಗಳಲ್ಲಿ ಅತ್ಯಂತ ಸರಳ ನಿರ್ವಹಣೆಯ ಗುಣಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ತಿಂಗಳ ಮೊದಲ ಭಾಗದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈ ಸಿಗ್ ಸಾರ್ ಅಸಾಲ್ಟ್ ರೈಫಲ್ಗಳ ನಿಯೋಜನೆಗೆ ಅನುಮೋದನೆಯನ್ನು ನೀಡಿದ್ದರು. ಚೀನಾದೊಂದಿಗಿನ 3,600 ಕಿಮೀ ಉದ್ದ ಗಡಿಯಲ್ಲಿ ನಿಯೋಜನೆಗೊಂಡಿರುವ ಯೋಧರು ಈ ರೈಫಲ್ ಬಳಕೆ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.