ನವದೆಹಲಿ: ಉದ್ಯೋಗ ಸೃಷ್ಟಿಯ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆಯುತ್ತಿರುವ ಬೆನ್ನಲ್ಲೇ, ಸರ್ಕಾರಿ ಇಲಾಖೆಗಳಲ್ಲಿ 3,79,000 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ನರೇಂದ್ರ ಮೋದಿ ಸರ್ಕಾರ ಘೋಷಿಸಿದೆ. ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಎಂಪ್ಲಾಯೀ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್ ಮತ್ತು ನ್ಯಾಷನಲ್ ಪೆನ್ಶನ್ ಸ್ಕೀಮ್, ಆದಾಯ ತೆರಿಗೆ ಪಾವತಿ ಮತ್ತು ವಾಹನಗಳ ಮಾರಾಟಗಳ ಅಂಕಿಅಂಶಗಳನ್ನು ಉಲ್ಲೇಖಿಸಿ ಅನೌಪಚಾರಿಕ ಮತ್ತು ಔಪಚಾರಿಕ ವಲಯಗಳಲ್ಲಿ ಕೋಟ್ಯಾಂತರ ಉದ್ಯೋಗ ಸೃಷ್ಟಿಯಾಗಿದೆ ಎಂದಿದ್ದರು. ಔಪಚಾರಿಕ ವಲಯದಲ್ಲಿ ಸೃಷ್ಟಿಯಾದ ಉದ್ಯೋಗಗಳ ಲೆಕ್ಕವನ್ನು ಇಪಿಎಫ್ಇ, ಎನ್ಪಿಸಿ ಮತ್ತು ಐಟಿ ಪಾವತಿಗಳ ನೋಂದಣಿಯಿಂದ ಹಾಕಲಾಗುತ್ತದೆ. ಮೂಲಸೌಕರ್ಯ, ಹೋಟೆಲ್, ಸಾರಿಗೆ ವಲಯಗಳ ಚಟುವಟಿಕೆಗಳಿಂದ ಅನೌಪಚಾರಿಕ ವಲಯದಲ್ಲಿ ಸೃಷ್ಟಿಯಾದ ಉದ್ಯೋಗವನ್ನು ಲೆಕ್ಕಹಾಕಲಾಗುತ್ತದೆ. ಉದ್ಯೋಗ ಸೃಷ್ಟಿ ಲೆಕ್ಕ ಹಾಕುವ ಸರಿಯಾದ ಮಾರ್ಗವನ್ನು ಕಂಡುಹಿಡಿಯುವವರೆಗೂ, ಇದೇ ಅತ್ಯುತ್ತಮ ವಿಧಾನವಾಗಿ ಮುಂದುವರೆಯುತ್ತದೆ.
ಭಾರತೀಯ ರೈಲ್ವೇ 12,70,714 ಸಿಬ್ಬಂದಿಗಳ ಸಾಮರ್ಥ್ಯವನ್ನು ಹೊಂದಿದ್ದು, ದೇಶದ ಅತೀದೊಡ್ಡ ಉದ್ಯೋಗದಾತನೂ ಹೌದು. 2019ರ ಮಾರ್ಚ್ 1ರ ವೇಳೆಗೆ ಇದು 98,999 ಉದ್ಯೋಗವನ್ನು ಸೃಷ್ಟಿಸಲಿದೆ. ಪಿಯೂಶ್ ಗೋಯಲ್ ನೇತೃತ್ವದಲ್ಲಿ, ರೈಲ್ವೇ ಗರಿಷ್ಠ ಸರ್ಕಾರಿ ಉದ್ಯೋಗವನ್ನು ದೇಶದಲ್ಲಿ ಸೃಷ್ಟಿಸಿದೆ. ಇನ್ನೊಂದೆಡೆ 10,52,351 ಸಿಬ್ಬಂದಿಗಳ ಸಾಮರ್ಥ್ಯ ಹೊಂದಿರುವ ಪೊಲೀಸ್ ಇಲಾಖೆಯೂ ಮಾರ್ಚ್ ವೇಳೆಗೆ 79,353 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ.
ಆದಾಯ ತೆರಿಗೆ ಪಾವತಿಯಲ್ಲಿ ಹೆಚ್ಚಳವಾಗಿದೆ. 2017ರ ಮಾರ್ಚ್ನಲ್ಲಿ 53,394 ಇದ್ದ ಉದ್ಯೋಗಿ ಆದಾಯ ತೆರಿಗೆ ಪಾವತಿದಾರರ ಸಂಖ್ಯೆ, ಮಾರ್ಚ್ 2018ಕ್ಕೆ 92,842 ಆಗಿದೆ. 2019ರ ಮಾರ್ಚ್ ವೇಳೆಗೆ ನಾಗರಿಕ ವಿಮಾನಯಾನ ಸಚಿವಾಲಯ 2,363 ಹೆಚ್ಚುವರಿ ಉದ್ಯೋಗಿಗಳನ್ನು ಹೊಂದಲಿದೆ. ಅಂಚೆ ಇಲಾಖೆ 4,21,068 ಸಿಬ್ಬಂದಿಗಳನ್ನು ಹೊಂದಲಿದೆ. ವಿದೇಶಾಂಗ ಸಚಿವಾಲಯವು ಎರಡು ವರ್ಷದಲ್ಲಿ 1,800 ಉದ್ಯೋಗಗಳನ್ನು ಸೃಷ್ಟಿಸಿದೆ. 2017ರಲ್ಲಿ 10,044 ಇದ್ದ ಸಚಿವಾಲಯದ ಸಾಮರ್ಥ್ಯ ಈಗ 11,877ಕ್ಕೆ ಏರಿಕೆಯಾಗಿದೆ.
ಇದಲ್ಲದೇ ಐಟಿ ವಲಯಗಳಲ್ಲೂ ಸಾಕಷ್ಟು ಪ್ರಮಾಣದ ಉದ್ಯೋಗಗಳು ಸೃಷ್ಟಿಯಾಗಿದೆ. ಉದ್ಯಮಗಳೂ ಉತ್ತೇಜನವನ್ನು ಪಡೆಯುತ್ತಿದ್ದು, ಸಾಕಷ್ಟು ಮಂದಿಗೆ ಉದ್ಯೋಗವನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.