ನವದೆಹಲಿ : 2005ಕ್ಕಿಂತ ಮೊದಲಿನಿಂದಲೂ ಚಲಾವಣೆಯಲ್ಲಿದ್ದ 500ಮತ್ತು 1000ಸಾವಿರದ ನೋಟುಗಳನ್ನು ಬ್ಯಾಂಕ್ಗಳಿಗೆ ಜಮಾಮಾಡಿ ಬದಲಿಸಿ ಕೊಳ್ಳಲು ಜೂ.31 ಕೊನೆಯದಿನ.
2005ಕ್ಕಿಂತ ಹಿಂದಿನ ನೋಟುಗಳಲ್ಲಿ ನೋಟಿನಲ್ಲಿ ಅಳವಡಿಸಬೇಕಾದ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿಲ್ಲವಾದುದರಿಂದ ಅದನ್ನು ಹಿಂಪಡೆಯಲು ಆರ್.ಬಿ.ಐ ಚಿಂತಿಸಿದೆ. ಈ ಹಿಂದೆ ಜ.1ನ್ನು ಕಡೆಯ ದಿನವನ್ನಾಗಿ ಘೋಷಿಸಿತ್ತು. ಅದನ್ನು ಈ ತಿಂಗಳ ಕೊನೆಯವರೆಗೆ ವಿಸ್ತರಿಸಿತ್ತು. 500ರಮತ್ತು 1000ದ ನೋಟುಗಳ ಬದಲಾವಣೆಗೆ ಇನ್ನು ಕೇವಲ ಕೆಲವೇ ದಿನಗಳಿವೆ.
2005ಕ್ಕಿಂತ ಹಿಂದಿನ ನೋಟುಗಳನ್ನು ಕಂಡುಹಿಡಿಯುದು ಹೇಗೆ?: ಈ ನೋಟುಗಳಲ್ಲಿ ಇಸವಿ ಮುದ್ರಸಲಾಗಿರುವುದಿಲ್ಲ ಮಾತ್ರವಲ್ಲ ನೋಟುಗಳ ಭದ್ರತಾ ಕ್ರಮಗಳನ್ನು ಅಳವಡಿಸಿಲ್ಲ. ಇದೀಗ ಅದನ್ನು ವಾಪಾಸ್ ಮಾಡಲು ಸೂಚಿಸಲಾಗಿದೆ. ಈ ಮೂಲಕ ಆರ್.ಬಿ.ಐ ಖೋಟಾ ನೋಟುಗಳ ಕಡಿವಾಣಕ್ಕೆ ಸಿದ್ಧವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.