ನವದೆಹಲಿ: ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯ ಭಾಗಿಯಾಗಿದೆ ಎಂದು ಒಂದು ಪತ್ರಿಕೆ ಪ್ರಕಟಿಸಿರುವ ವರದಿಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿರಸ್ಕರಿಸಿದ್ದು, ಪ್ರಧಾನಿಯಾಗಲಿ, ಪ್ರಧಾನಿಯವರ ಕಛೇರಿಯಾಗಲಿ ಒಪ್ಪಂದ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಿಲ್ಲ ಎಂದಿದ್ದಾರೆ.
ಈ ವಿಷಯದ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಅವರು, ವರದಿಯನ್ನು ಸತ್ತ ಕುದುರೆಯನ್ನು ಹೊಡೆದಂತಿದೆ ಎಂದಿರುವ ಅವರು, ರಾಜಕೀಯ ಪ್ರೇರಿತ ಎಂದು ಆರೋಪಿದ್ದಾರೆ, ಅಲ್ಲದೇ ಕಾಂಗ್ರೆಸ್ ವಿಷಯವಲ್ಲದ್ದನ್ನು ವಿಷಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಒಪ್ಪಂದದ ಸಂಪೂರ್ಣ ಉಸ್ತುವಾರಿಯನ್ನು ರಕ್ಷಣಾ ಸಚಿವಾಲಯವೇ ನೋಡಿಕೊಂಡಿದೆ. ಕಾಲಕಾಲಕ್ಕೆ ಪ್ರಧಾನಿ ಕಾರ್ಯಾಲಯ ಒಪ್ಪಂದದ ಬಗ್ಗೆ ಮಾಹಿತಿಯನ್ನು ಕೇಳುತ್ತಿತ್ತು. ಇದನ್ನು ಮಧ್ಯಪ್ರವೇಶ ಎಂದು ಕರೆಯಲು ಸಾಧ್ಯವೇ ಎಂದಿದ್ದಾರೆ.
ಯುಪಿಎ ಅವಧಿಯಲ್ಲಿ ಪ್ರಧಾನಿ ಕಾರ್ಯಾಲಯವನ್ನು ಸೋನಿಯಾ ಗಾಂಧಿಯವರೇ ನಡೆಸಿಕೊಂಡು ಹೋಗುತ್ತಿದ್ದರು, ಇದನ್ನು ಮೂಗು ತೂರಿಸುವುದು ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಪ್ರತಿಪಕ್ಷಗಳು, ಬಹುರಾಷ್ಟ್ರೀಯ ಮತ್ತು ಪಟ್ಟಭದ್ರಹಿತಾಸಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.