ನವದೆಹಲಿ: ನರೇಂದ್ರ ಮೋದಿ ಸರ್ಕಾರ ಚೀನಾ ಗಡಿಯಲ್ಲಿ ಮೂಲಸೌಕರ್ಯವನ್ನು ವೃದ್ಧಿಸುವ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡುತ್ತಿದೆ. ಅಲ್ಲದೇ, ಅಲ್ಲಿ ನಡೆಸಲಾಗುತ್ತಿರುವ ಕಾರ್ಯತಾಂತ್ರಿಕ ಮಹತ್ವದ ರಸ್ತೆ ಯೋಜನೆಗಳನ್ನು ಮೂರು ವರ್ಷದೊಳಗೆ ಪೂರ್ಣಗೊಳಿಸುವ ಗುರಿಯನ್ನು ಇಟ್ಟಿದೆ.
ಫೆ.9ರಂದು ಅರುಣಾಚಲ ಪ್ರದೇಶಕ್ಕೆ ಪ್ರಯಾಣಿಸಲಿರುವ ಪ್ರಧಾನಿ ಮೋದಿಯವರು, ಅಲ್ಲಿನ ಸೇಲಾ ಪಾಸ್ನಲ್ಲಿ ಸುರಂಗ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಸುರಂಗ ಕಾರ್ಯತಾಂತ್ರಿಕವಾಗಿ ಮಹತ್ವವಾದ ರಸ್ತೆ ಯೋಜನೆಗಳ ಭಾಗಿವಾಗಿದ್ದು, ತವಾಂಗ್ಗಿನ ಪ್ರಯಾಣವನ್ನು ಸಾಕಷ್ಟು ತಗ್ಗಿಸಲಿದೆ. ತವಾಂಗ್ ಭಾರತೀಯ ಸೈನಿಕರು ಅತ್ಯಧಿಕ ಪ್ರಮಾಣದಲ್ಲಿ ನಿಯೋಜನೆಗೊಂಡಿರುವ ಸೆಕ್ಟರ್ ಆಗಿದೆ.
ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ, ಸಿಕ್ಕಿಂ, ಉತ್ತರಾಖಾಂಡ ಮತ್ತು ಹಿಮಾಚಲ ಪ್ರದೇಶದ ಚೀನಾ ಗಡಿಗಳಲ್ಲಿ ನಿರ್ಮಾಣ ಮಾಡಲಾಗುತ್ತಿರುವ 61 ಕಾರ್ಯತಾಂತ್ರಿಕ ರಸ್ತೆಗಳು 2022ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬಾರ್ಡರ್ ರೋಡ್ಸ್ ಆರ್ಗನೈಝೇಶನ್ ತಿಳಿಸಿದೆ.
ಈ ರಸ್ತೆ ಯೋಜನೆಗಳ ಒಟ್ಟು ಉದ್ದ 3,417 ಕಿಮೀ ಆಗಿದ್ದು, ಇದರಲ್ಲಿ 2,350 ಕಿಮೀ ಈಗಾಗಲೇ ಪೂರ್ಣಗೊಂಡಿದೆ.
ಬಾರ್ಡರ್ ರೋಡ್ಸ್ ಆರ್ಗನೈಝೇಶನ್ ಒಟ್ಟು 32 ಸಾವಿರ ಕಾರ್ಯಪಡೆಯನ್ನು ಹೊಂದಿದ್ದು, ಇದರಲ್ಲಿ ಶೇ.67ರಷ್ಟು ಮಂದಿ ಚೀನಾ ಗಡಿಯಲ್ಲೇ ನಿಯೋಜಿತರಾಗಿದ್ದಾರೆ.
ಸೇಲಾ ಪಾಸ್ ಸುರಂಗವನ್ನು 2018ರ ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು. ಬಲಿಪರ-ಚಾರ್ದೂರ-ತವಾಂಗ್ ರಸ್ತೆ ಯೋಜನೆಯ ಭಾಗವಾಗಿ ಇದನ್ನು ನಿರ್ಮಾಣ ಮಾಡಲಾಗಿದೆ, ತವಾಂಗ್ನ ಪ್ರಯಾಣವನ್ನು ಇದು ಸುಮಾರು ಎರಡು ಗಂಟೆಯಷ್ಟು ಕಡಿಮೆಗೊಳಿಸಲಿದೆ ಮತ್ತು ಸೇನೆಯ ಗಡಿ ಸಂಪರ್ಕವನ್ನೂ ಉತ್ತಮಪಡಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.