ನವದೆಹಲಿ: ಮೊನಾಕೋ ರಾಜಕುಮಾರ ಅಲ್ಬರ್ಟ್-II ಅವರು ಮಂಗಳವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಮುಖ್ಯವಾಗಿ ಉಭಯ ಮುಖಂಡರುಗಳ ನಡುವೆ, ನವೀಕರಿಸಬಹುದಾದ ಶಕ್ತಿ, ಹವಮಾನ ವೈಪರೀತ್ಯದ ಬಗ್ಗೆ ಮಾತುಕತೆಗಳು ನಡೆದವು.
ಅಲ್ಬರ್ಟ್ ಅವರು, ಒಂದು ವಾರಗಳ ಭಾರತ ಪ್ರವಾಸಕ್ಕಾಗಿ ಸೋಮವಾರ ನವದೆಹಲಿಗೆ ಬಂದಿಳಿದಿದ್ದು, ಇಂದು ಹೈದರಾಬಾದ್ ಹೌಸ್ನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದರು.
ಈ ಬಗ್ಗ ಮಾಹಿತಿ ನೀಡಿರುವ ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಅವರು, ‘ಉಭಯ ದೇಶಗಳ ನಡುವಣ ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾತುಕತೆಗಳು ನಡೆದವು, ಪರಿಸರ, ಹವಮಾನ ವೈಪರೀತ್ಯ, ನವೀಕರಿಸಬಹುದಾದ ಶಕ್ತಿಯ ಬಗ್ಗೆ ಪರಸ್ಪರ ಚಿಂತನೆಗಳನ್ನು ಹಂಚಿಕೊಳ್ಳಲಾಯಿತು’ ಎಂದಿದ್ದಾರೆ.
2007ರಿಂದ ಭಾರತ ಮತ್ತು ಮೊನಾಕೋ ರಾಷ್ಟ್ರಗಳು ದ್ವಿಪಕ್ಷೀಯ ಸಂಬಂಧವನ್ನು ಆರಂಭಿಸಿದರೂ, ಇವುಗಳ ನಡುವಣ ಸ್ನೇಹ ಹಿಂದಿನಿಂದಲೂ ಇತ್ತು.
ಸೋಮವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಇವರು ಮಾತುಕತೆ ನಡೆಸಿ, ಸ್ಮಾರ್ಟ್ಸಿಟಿ, ಸಮುದ್ರ ಪರಿಸರ, ಪ್ರವಾಸೋದ್ಯಮಗಳ ಬಗ್ಗೆ ಚರ್ಚಿಸಿದರು.
ಅಲ್ಲದೇ, ಅಲ್ಬರ್ಟ್ ಅವರು ಭಾರತ-ಮೊನಾಕೋ ಬ್ಯುಸಿನೆಸ್ ಫೋರಂನಲ್ಲೂ ಸೋಮವಾರ ಭಾಗಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.