ನವದೆಹಲಿ: ಕಳೆದ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವಾರು ಕಾರ್ಯಗಳನ್ನು ಕೈಗೆತ್ತಿಕೊಂಡು ಅದನ್ನು ಪೂರ್ಣಗೊಳಿಸುವತ್ತ ಕಾರ್ಯೋನ್ಮುಖಗೊಂಡಿದ್ದಾರೆ.
ಇದೇ ರೀತಿ, ಜನವರಿ 27ರಂದು ತಮಿಳುನಾಡಿನ ಮಧುರೈನಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ 1996ರಿಂದ ನೆನೆಗುದಿಗೆ ಬಿದ್ದಿದ್ದ ವಿಷಯವೊಂದನ್ನು ಪ್ರಸ್ತಾಪ ಮಾಡಿದರು. ಅದುವೇ, ದೇವೇಂದ್ರ ಕುಲ ವೆಲ್ಲಲರ್ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗಿಡುವ ಪ್ರಸ್ತಾಪ.
‘ಸ್ನೇಹಿತರೇ, ಇನ್ನೊಂದು ವಿಷಯದ ಬಗ್ಗೆ ನಿಮ್ಮ ಬಳಿ ಮಾತನಾಡಲು ಇಚ್ಛಿಸುತ್ತೇನೆ. ಅದು ದೇವೇಂದ್ರ ಕುಲ ಮೆಲ್ಲಲರ್ ಸಮುದಾಯಕ್ಕೆ ಸಂಬಂಧಪಟ್ಟದ್ದು ಮತ್ತು ಅವರಿಗೆ ನ್ಯಾಯ ಒದಗಿಸಿ ಅವಕಾಶಗಳನ್ನು ದೊರಕಿಸಿಕೊಡುವುದು’ ಎಂದು ಮೋದಿ ಹೇಳಿದ್ದರು.
ಸಮುದಾಯದ ಬಹುತೇಕರಿಂದ ಅವರ ಹೇಳಿಕೆಗೆ ಶ್ಲಾಘನೆಗಳು ವ್ಯಕ್ತವಾದವು, ಅದರಲ್ಲೂ ಡಾ.ಕೆ.ಕೃಷ್ಣಸ್ವಾಮಿ ಸ್ಥಾಪಿಸಿದ ಪುತಿಯಾ ತಮಿಝಗಂ ಪಕ್ಷ ಅವರನ್ನು ಕೊಂಡಾಡಿತು.
ತಕ್ಷಣವೇ ಅವರ ಮಗ ಶ್ಯಾಮ್ ಟ್ವಿಟ್ ಮಾಡಿ, ‘ಪರಿಶಿಷ್ಟ ಜಾತಿ ಪಟ್ಟಿಯಿಂದ ನಮ್ಮ ಸಮುದಾಯವನ್ನು ಹೊರಗಿಟ್ಟು, ಇದರ ಹಿಂದುಳಿದ ಸಮುದಾಯದಡಿ ಸೇರ್ಪಡೆಗೊಳಿಸುವ ನಮ್ಮ ಬೇಡಿಕೆ ಶೀಘ್ರದಲ್ಲೇ ಈಡೇರುತ್ತದೆ ಎಂದು ನಂಬಿದ್ದೇವೆ’ ಎಂದು ಹೇಳಿದ್ದರು.
ದೇವೇಂದ್ರ ಕುಲ ಸಮುದಾಯದವರು ಬ್ರಿಟಿಷ್ ಆಳ್ವಿಕೆಗೂ ಮುನ್ನ ಕೃಷಿಕರಾಗಿದ್ದರು, ಆದರೆ ಅವರ ವೃತ್ತಿಯನ್ನು ಬ್ರಿಟಿಷರು ಹಾಳುಗೆಡವಿದ್ದರು. ಸಮುದಾಯದ ಬಹುತೇಕರು ಬರಡು ಭೂಮಿ ಮಾಲೀಕರು, ಹಾಗಾಗಿ ನಮ್ಮನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಟ್ಟು ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂಬುದು ಈ ಸಮುದಾಯದವರ ಬೇಡಿಕೆಯಾಗಿದೆ.
ಒಡೆದು ಆಳುವ ಸಲುವಾಗಿಯೇ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಬ್ರಿಟಿಷರು ಸೇರ್ಪಡೆಗೊಳಿಸಿದರು ಎಂಬುದು ಇವರ ವಾದವಾಗಿದೆ. ದ್ರಾವಿಡಿಯನ್ ಪಕ್ಷಗಳು ಇವರ ಕುಂದುಕೊರತೆಗಳನ್ನು ಆಲಿಸುವಲ್ಲಿ ನಿರ್ಲಕ್ಷ್ಯ ಧೋರಣೆಯನ್ನು ತಳೆದಿದೆ, ಹೀಗಾಗಿ ಅವರು ದ್ರಾವಿಡಿಯನ್ ಪಕ್ಷಗಳ ವಿರುದ್ಧವೇ ಸೆಟೆದು ನಿಂತಿದ್ದಾರೆ.
ಪ್ರಧಾನಿಗಳು ಈ ಸಮುದಾಯದ ಬಹುದಿನಗಳ ಬೇಡಿಕೆಗೆ ಮತ್ತೆ ಜೀವ ನೀಡಿದ್ದು, ಇವರನ್ನು ಪರಿಶಿಷ್ಟ ಜಾತಿಯಿಂದ ಕೈಬಿಟ್ಟು ಹಿಂದುಳಿದ ವರ್ಗಕ್ಕೆ ಸೇರಿಸುವಲ್ಲಿ ನೆರವಾಗುವರೇ ಎಂದು ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.