ಮುಂಬಯಿ: ಕಡಿಮೆ ಲಿಂಗ ಅನುಪಾತ ಮತ್ತು ಮಹಿಳಾ ಅನಕ್ಷರತೆಯಿಂದ ನಮ್ಮ ದೇಶ ನಿಧಾನಕ್ಕೆ ಹೊರ ಬರುತ್ತಿದೆ. 2019ರ ಚುನಾವಣೆಯಲ್ಲಿ ಮತದಾರರ ಪ್ರಮಾಣತೆಯಲ್ಲಿ ಮಹಿಳೆಯರ ಪ್ರಮಾಣ ಪುರುಷರಿಗೆ ಸರಿ ಸಮನಾವಾಗಿದೆ. ಎರಡು ದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡಿನ ಪೈಕಿ ಒಂದು ರಾಜ್ಯದಲ್ಲಿ ಪುರುಷ ಮತ್ತು ಮಹಿಳಾ ಮತದಾರರ ನಡುವಣ ಅಂತರ ಗಣನೀಯ ಮಟ್ಟದಲ್ಲಿ ತಗ್ಗಿದೆ. ಇನ್ನೊಂದು ರಾಜ್ಯದಲ್ಲಿ, ನೋಂದಾಯಿತ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ.
2014ರ ಚುನಾವಣೆಯಲ್ಲಿ, ಕೇರಳ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ಪುದುಚೇರಿಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿತ್ತು, ಇದೀಗ ಈ ರಾಜ್ಯಗಳ ಸಾಲಿಗೆ ತಮಿಳುನಾಡು ಸೇರ್ಪಡೆಗೊಂಡಿದೆ.
ತಮಿಳುನಾಡಿನ 5.91 ಕೋಟಿ ಮತದಾರರ ಪೈಕಿ, 2.98 ಕೋಟಿ ಮಹಿಳೆಯರು, 2.92 ಕೋಟಿ ಪುರುಷರು. ಮಹಿಳಾ ಮತದಾರರ ಸಂಖ್ಯೆ ಕಳೆದ ಬಾರಿಗಿಂತ ಇಲ್ಲಿ ಶೇ.11ರಷ್ಟು ಹೆಚ್ಚಾಗಿದೆ.
ಮಹಾರಾಷ್ಟ್ರದಲ್ಲಿ, ಮತದಾರರ ಲಿಂಗಾನುಪಾತದಲ್ಲಿ ಏರಿಕೆ ಕಾಣುತ್ತಿದೆ. ಮಹಿಳಾ ಮತದಾರರ ಸಂಖ್ಯೆ 13 ಲಕ್ಷದಷ್ಟು ಏರಿಕೆಯಾಗಿದೆ. ಇಲ್ಲಿ ಒಟ್ಟು 8.73 ಕೋಟಿ ಮತದಾರರಿದ್ದು, ಇವರ ಪೈಕಿ 4.57 ಕೋಟಿ ಪುರುಷರು ಮತ್ತು 4.16 ಕೋಟಿ ಮಹಿಳೆಯರು. 2014ರಲ್ಲಿ ಇಲ್ಲಿ ಸಾವಿರ ಪುರುಷರಿಗೆ 905 ಮಹಿಳಾ ಮತದಾರರಿದ್ದರು, ಈ ಬಾರಿ ಅದು 911ಕ್ಕೆ ಏರಿಕೆಯಾಗಿದೆ.
ದೇಶದಲ್ಲೂ ಕಳೆದ ಬಾರಿಗಿಂತ ಈ ಬಾರಿ ಮಹಿಳಾ ಮತದಾರರ ಸಂಖ್ಯೆಯಲ್ಲಿ ಮಹತ್ವದ ಏರಿಕೆ ಕಂಡು ಬಂದಿದೆ.
ಮಹಿಳೆಯರು ಮತದಾನ ಪ್ರಕ್ರಿಯೆಯಿಂದ ಹೊರಗಿರಬಾರದು ಎಂಬ ನಿಟ್ಟಿನಲ್ಲಿ ಚುನಾವಣಾ ಆಯೋಗ ಕೈಗೊಂಡ ಅಭಿಯಾನಗಳು ಕೂಡ ಮಹಿಳಾ ಮತದಾರರ ಪ್ರಮಾಣ ಏರಿಕೆಗೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.