ನವದೆಹಲಿ: ಇಡೀ ರೈಲ್ವೇ ನೆಟ್ವರ್ಕ್ನ್ನು ಮೇಲ್ವಿಚಾರಣೆ ನಡೆಸಲು ಅನುವು ಮಾಡಿಕೊಡುವಂತಹ ಸಾಫ್ಟ್ವೇರ್ವೊಂದನ್ನು ರೈಲ್ವೇ ಸಚಿವಾಲಯ ಅಭಿವೃದ್ಧಿಪಡಿಸಿದೆ.
‘ಇದೃಷ್ಟಿ’ ಎಂಬ ಸಾಫ್ಟ್ವೇರ್ನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ರೈಲಿನ ಚಲನೆ ಮತ್ತು ಶಬ್ದ ಸೇರಿದಂತೆ ರೈಲಿನ ಒಟ್ಟು ಕಾರ್ಯವನ್ನು ಕಛೇರಿಯಲ್ಲೇ ಕೂತು ಆಲಿಸಬಹುದಾದಂತಹ ಅವಕಾಶವನ್ನು ಕಲ್ಪಿಸಿಕೊಡಲಿದೆ. ಈ ಸಾಫ್ಟ್ವೇರ್ ಮೂಲಕ ರೈಲ್ವೇ ಸಚಿವ ಪಿಯೂಶದ್ ಗೋಯಲ್ ಅವರೂ ರೈಲನ್ನು ಪರಿಶೀಲನೆ ಮಾಡಬಹುದಾಗಿದೆ.
ಶೀಘ್ರದಲ್ಲೇ ಈ ತಂತ್ರಜ್ಞಾನ ಜನಸಾಮಾನ್ಯರಿಗೂ ಲಭ್ಯವಾಗಲಿದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಸೆಂಟರ್ ರೈಲ್ವೇ ಇನ್ಫಾರ್ಮೆಶನ್ ಸ್ಟಿಸ್ಟಮ್ ಈ ಸಾಫ್ಟ್ವೇರ್ನ್ನು ಅಭಿವೃದ್ಧಿಪಡಿಸಿದೆ. ಈ ಸಾಫ್ಟ್ವೇರ್ ಮೂಲಕ ಸಚಿವರು, ಸರಕು ಮತ್ತು ಪ್ರಯಾಣಿಕ ರೈಲಿನ ಆದಾಯ, ಸರಕು ಲೋಡಿಂಗ್, ಅನ್ ಲೋಡಿಂಗ್, ಸಮಯಪ್ರಜ್ಞೆ, ಹಲವು ಯೋಜನೆ, ಕುಂದುಕೊರತೆ, ರೈಲು ನಿಲ್ದಾಣ ವಿವರ ಇತ್ಯಾದಿಗಳ ಬಗ್ಗೆ ಹದ್ದಿನ ಕಣ್ಣಿಡಬಹುದಾಗಿದೆ.
ಇದರ ವೆಬ್ಸೈಟ್ ಮೂಲಕ ರೈಲಿನ ಸಮಯವನ್ನೂ ಸಚಿವಾಲಯ ಮಾಹಿತಿ ಪಡೆಯಬಹುದು. ಅಲ್ಲದೇ, ನೈರ್ಮಲ್ಯ, ಸುರಕ್ಷತೆ ಬಗ್ಗೆಯೂ ಕಣ್ಗಾವಲು ಇಡಬಹುದು.