ನವದೆಹಲಿ: ಬಲಿಷ್ಠ ಆರ್ಥಿಕ ಪ್ರಗತಿ ಮತ್ತು ವಿಕಸನಗೊಳ್ಳುತ್ತಿರುವ ನಿಯಂತ್ರಕ ಆಡಳಿತದಿಂದಾಗಿ ಭಾರತದ ವಿಮೆ ಮತ್ತು ಮರುವಿಮಾ ವಲಯಗಳು ಪ್ರಗತಿ ಕಾಣಲಿವೆ ಎಂದು ಮೂಡಿಯ ಇನ್ವೆಸ್ಟರ್ಸ್ ಸರ್ವಿಸ್ ಹೇಳಿದೆ.
ಕಡಿಮೆ ಹಣದುಬ್ಬರದೊಂದಿಗೆ ಜಿಡಿಪಿ ವಿಸ್ತರಣೆಯಿಂದಾಗಿ ಮುಂದಿನ 3-4 ವರ್ಷಗಳಲ್ಲಿ ಜೀವನೇತರ ವಲಯದಲ್ಲಿ ಡಬಲ್ ಡಿಜಿಟ್ ಪ್ರಗತಿಯಾಗಲಿದೆ ಎಂದಿದೆ.
2018 ರ ಹಣಕಾಸು ವರ್ಷದಲ್ಲಿ, ಜೀವನೇತರ ಮತ್ತು ಜೀವ ವಿಮಾ ಕ್ಷೇತ್ರಗಳ ಒಟ್ಟಾರೆ ಮೊತ್ತದ ಪ್ರೀಮಿಯಂಗಳು ಶೇ 11.5 ರಷ್ಟು ಹೆಚ್ಚಳವಾಗಿ 6.1 ಲಕ್ಷ ಕೋಟಿ ರೂ.ಗೆ (USD 94 ಬಿಲಿಯನ್) ಏರಿಕೆ ಕಂಡವೆ. ಇದು 5 ವರ್ಷಗಳ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು (ಸಿಎಜಿಆರ್) 11 ಶೇಕಡಾಕ್ಕೆ ತಂದಿದೆ.
ಭಾರತದ ಬಲಿಷ್ಠ ಆರ್ಥಿಕತೆ ಮತ್ತು ವಿಕಾಸಗೊಳ್ಳುತ್ತಿರುವ ನಿಯಂತ್ರಕ ಕ್ರಮಗಳು ವಿಮಾ ವಲಯದ ಪ್ರಗತಿಗೆ ಸಹಕರಿಸುತ್ತಿವೆ’ ಎಂದು ಮೂಡಿ ತನ್ನ ವರದಿ ’ಇನ್ಸುರೆನ್ಸ್-ಇಂಡಿಯಾ’ದಲ್ಲಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.