×
Home About Us Advertise With s Contact Us

ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಟ್ರೈನ್ 18

ನವದೆಹಲಿ: ಅತ್ಯಾಧುನಿಕ ಟ್ರೈನ್ 18 ಮೂಲಕ ಭಾರತ, 200 ಬಿಲಿಯನ್ ಡಾಲರ್ ರೈಲ್ ಕೋಚ್ ಮತ್ತು ವ್ಯಾಗನ್ಸ್‌ಗಳ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ. ಪೆರು, ಇಂಡೋನೇಷ್ಯಾ, ಸಿಂಗಾಪುರ, ಮಲೇಷ್ಯಾ ಮತ್ತು ಇತರ ಮಧ್ಯ ಪೂರ್ವ ದೇಶಗಳು ಟ್ರೈನ್ 18ನಲ್ಲಿ ಆಸಕ್ತಿ ತೋರಿಸಿವೆ.

ಸ್ವದೇಶಿ ಟ್ರೈನ್ 18ನ್ನು ಭಾರತೀಯ ರೈಲ್ವೇಯ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ನಿರ್ಮಾಣ ಮಾಡಿದ್ದು, ಶತಾಬ್ದಿ ಎಕ್ಸ್‌ಪ್ರೆಸ್‌ನ್ನು ರಿಪ್ಲೇಸ್ ಮಾಡುವುದು ಇದರ ಉದ್ದೇಶವಾಗಿದೆ. ಇದು ದೇಶದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ವಾರಣಾಸಿ ಮತ್ತು ದೆಹಲಿ ನಡುವೆ ಇದು ಸಂಚರಿಸುತ್ತದೆ.

ಈ ಟ್ರೈನ್ ಸೆಟ್ ಬಗ್ಗೆ ಹಲವು ದೇಶಗಳು ಆಸಕ್ತಿ ತೋರಿಸಿದ್ದು, ಸ್ವದೇಶಿ ನಿರ್ಮಿತ ರೈಲಿಗೆ ಇಷ್ಟೊಂದು ಬೇಡಿಕೆ ಬರುತ್ತಿರುವುದು ಸಮಸ್ತೆ ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ. ಕೋಚ್ ಮತ್ತು ವ್ಯಾಗನ್‌ಗಳ ಮಾರುಕಟ್ಟೆ 2300 ಬಿಲಿಯನ್ ಡಾಲರ್‌ನದ್ದಾಗಿದ್ದು, ಭಾರತವೂ ಅದರಲ್ಲಿ ಪಾಲು ಪಡೆಯುವ ಉತ್ಸಾಹದಲ್ಲಿದೆ. ಅದಕ್ಕೂ ಮೊದಲು ಟ್ರೈನ್ 18ನ್ನು ಅತ್ಯಂತ ಯಶಸ್ವಿಯಾಗಿ ಸಂಚರಿಸುವಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದು ರೈಲ್ವೇ ಮಂಡಳಿ ಸದಸ್ಯ ರಾಜೇಶ್ ಅಗರ್‌ವಾಲ್ ಹೇಳಿದ್ದಾರೆ, ಅಗ್ಗದ ದರ, ತಂತ್ರಜ್ಞಾನದಿಂದ ಟ್ರೈನ್ 18ಗೆ ಇತರ ದೇಶಗಳು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದೆ ಎಂಬುದು ಅವರ ಅನಿಸಿಕೆಯಾಗಿದೆ. ಈ ಟ್ರೈನ್ 18ನ ವೆಚ್ಚ ಕೇವಲ 100 ಕೋಟಿ ರೂಪಾಯಿ ಆಗಿದ್ದು, ಇದರಲ್ಲಿ ಅಳವಡಿಸಲಾದ ಸೌಲಭ್ಯಗಳಿಗೆ 250 ಕೋಟಿ ರೂಪಾಯಿಯನ್ನು ವ್ಯಯಿಸಲಾಗಿದೆ.

ಫೆಬ್ರವರಿಯಲ್ಲಿ ಭಾರತ ಇಂಟರ್‌ನ್ಯಾಷನಲ್ ಸ್ಪೀಡ್ ರೈಲ್ ಅಸೋಸಿಯೇಶನನ್ನು ಆಯೋಜಿಸಲಿದ್ದು, ಈ ಮೂಲಕ ಹೊಸ ಸೆಮಿ ಹೈ ಸ್ಪೀಡ್ ಕ್ಲಬ್‌ಗೆ ಕಾಲಿಡಲಿದೆ. ಅಷ್ಟೇ ಅಲ್ಲದೇ, ಟ್ರೈನ್ 18 ಭಾರತದ ಉತ್ಪಾದನಾ ಕೌಶಲ್ಯವನ್ನೂ ಜಗತ್ತಿನ ಮುಂದೆ ತೆರೆದಿಡಲಿದೆ.

 

Recent News

Back To Top
error: Content is protected !!