ನವದೆಹಲಿ: ಆರ್ಮಿ ಕಾರ್ಪ್ಸ್ನ ಮಿಲಿಟರಿ ಪೊಲೀಸ್ನಲ್ಲಿ ಮಹಿಳೆಯರನ್ನು ನಿಯೋಜನೆಗೊಳಿಸುವ ಐತಿಹಾಸಿಕ ನಿರ್ಧಾರಕ್ಕೆ ರಕ್ಷಣಾ ಸಚಿವಾಲಯ ಶುಕ್ರವಾರ ಅನುಮೋದನೆಯನ್ನು ನೀಡಿದೆ.
ಇದುವರೆಗೆ ಸೇನೆಯಲ್ಲಿ ಮಹಿಳೆಯರಿಗೆ ಕೇವಲ ಅಧಿಕಾರಿಗಳಾಗಿ ಪ್ರವೇಶಿಸಲು ಅವಕಾಶವಿತ್ತು, ಅದು ಕೂಡ ಆಯ್ದ ಘಟಕಗಳಿಗೆ ಮಾತ್ರ.
ಟ್ವಿಟ್ ಮಾಡಿರುವ ರಕ್ಷಣಾ ಸಚಿವಾಲಯ, ‘ಶ್ರೇಣೀಕೃತ ರೀತಿಯಲ್ಲಿ ಮಹಿಳೆಯರನ್ನು ಸೇನೆಯ ಮಿಲಿಟರಿ ಪೊಲೀಸ್ ಕಾರ್ಪ್ಸ್ಗೆ ನಿಯೋಜನೆಗೊಳಿಸಲಾಗುತ್ತದೆ. ಒಟ್ಟು ಕಾರ್ಪ್ಸ್ನ ಶೇ.20ರಷ್ಟು ಮಹಿಳೆಯರು ಇರಲಿದ್ದಾರೆ’ ಎಂದು ಟ್ವಿಟ್ ಮಾಡಿದೆ.
ರಕ್ಷಣಾ ವಲಯದಲ್ಲಿ ಮಹಿಳೆಯರ ಪ್ರಮಾಣವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ನಿರ್ಧಾರ ಇದಾಗಿದ್ದು, ಸೇನಾಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಈ ಬಗ್ಗೆ ಬಹಳ ಹಿಂದೆಯೇ ಘೋಷಣೆ ಮಾಡಿದ್ದರು.
ಕಾರ್ಯಾಚರಣೆಗಳ ವೇಳೆ ಮಹಿಳೆಯರನ್ನೂ ಎದುರಿಸುವ ಪರಿಸ್ಥಿತಿಗಳು ಉದ್ಭವವಾಗುತ್ತದೆ. ಈ ವೇಳೆ ಮಹಿಳಾ ಯೋಧೆಯರು ಹೆಚ್ಚಿನ ಸಹಾಯಕ್ಕೆ ಬರಲಿದ್ದಾರೆ ಎಂದು ರಾವತ್ ಅಭಿಪ್ರಾಯಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.