ಬೆಂಗಳೂರು: ಕ್ಷಿಪ್ರ ನಗರೀಕರಣ, ಬಲಿಷ್ಠ ಆರ್ಥಿಕ ಪ್ರಗತಿಯನ್ನು ಕಾಣುತ್ತಿರುವ ಬೆಂಗಳೂರು, ವಿಶ್ವದ ನಂಬರ್ 1 ಕ್ರಿಯಾಶೀಲ ನಗರವಾಗಿ ಹೊರಹೊಮ್ಮಿದೆ.
ಜೆಎಲ್ಎಲ್ನ ಸಿಟಿ ಮೊಮೆಂಟಮ್ ಇಂಡೆಕ್ಸ್ ತನ್ನ ಸಮೀಕ್ಷೆಯ ವರದಿಯನ್ನು ಬಹಿರಂಗಪಡಿಸಿದ್ದು, ಇದರಲ್ಲಿ ವಿಶ್ವದ 131 ನಗರಗಳನ್ನು ವಾಣಿಜ್ಯವಾಗಿ ಕ್ರಿಯಾಶೀಲ ನಗರಗಳೆಂದು ಗುರುತಿಸಿದೆ.
ಮೊದಲ ಸ್ಥಾನದಲ್ಲಿ ಬೆಂಗಳೂರು, ಎರಡನೇ ಸ್ಥಾನದಲ್ಲಿ ಹೈದರಾಬಾದ್ ಕಾಣಿಸಿಕೊಂಡಿದೆ. ನಾಲ್ಕನೇ ಸ್ಥಾನದಲ್ಲಿ ದೆಹಲಿ ಇದೆ. ಪುಣೆ 5ನೇ ಸ್ಥಾನದಲ್ಲಿ, ಚೆನ್ನೈ 7ನೇ ಸ್ಥಾನದಲ್ಲಿದೆ.
ಟಾಪ್ 20 ನಗರಗಳ ಪೈಕಿ 19 ನಗರಗಳು ಏಷ್ಯಾ ಪೆಸಿಫಿಕ್ನದ್ದು ಎಂಬುದು ವಿಶೇಷ.
ದೃಢವಾದ ತಂತ್ರಜ್ಞಾನ, ಇನ್ನೋವೇಟಿವ್ ಎಕೋಸಿಸ್ಟಮ್ನ್ನು ಮುಖ್ಯ ಮಾನದಂಡವನ್ನಾಗಿಸಿ ಸಮೀಕ್ಷೆ ನಡೆಸಲಾಗಿದೆ. ಬೆಂಗಳೂರು ಮತ್ತು ಹೈದರಾಬಾದ್ ಎರಡೂ ಮಾಹಿತಿ
ತಂತ್ರಜ್ಞಾನದ ಉತ್ತುಂಗದಲ್ಲಿವೆ, ಇಲ್ಲಿ ಸ್ಟಾರ್ಟ್ಅಪ್ ಸಂಸ್ಕೃತಿ ಹೇರಳವಾಗಿದೆ ಎಂದು ಸಮೀಕ್ಷೆ ಹೇಳಿದೆ.
source: www.indiatimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.