ಅಹ್ಮದಾಬಾದ್: ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು, ಗುರುವಾರ ಅಹ್ಮದಾಬಾದ್ ಶಾಪಿಂಗ್ ಫೆಸ್ಟಿವಲ್ನಲ್ಲಿ ಶಾಪಿಂಗ್ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿತ್ನ ಸೈಡ್ಲೈನ್ನಲ್ಲಿ ಶಾಪಿಂಗ್ ಫೆಸ್ಟಿವಲ್ನ್ನು ಅಯೋಜನೆಗೊಳಿಸಲಾಗಿದ್ದು, ಇಲ್ಲಿ ಪ್ರಧಾನಿಗಳು ಖಾದಿ ಜಾಕೆಟ್ ಸೇರಿದಂತೆ ಇತರ ಖಾದಿ ಉತ್ಪನ್ನಗಳನ್ನು ಖರೀದಿ ಮಾಡಿ ರುಪೇ ಕಾರ್ಡ್ ಮೂಲಕ ಹಣವನ್ನು ಪಾವತಿ ಮಾಡಿದರು.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘ಅಹ್ಮದಾಬಾದ್ ಶಾಪಿಂಗ್ ಫೆಸ್ಟಿವಲ್ನಲ್ಲಿ ನನಗೂ ಶಾಪಿಂಗ್ ಮಾಡದೆ ಇರಲು ಸಾಧ್ಯವಾಗಲಿಲ್ಲ, ರುಪೇ ಕಾರ್ಡ್ ಬಳಸಿ ಕೆಲವೊಂದು ಖಾದಿ ಉತ್ಪನ್ನಗಳನ್ನು ಖರೀದಿ ಮಾಡಿದೆ’ ಎಂದಿದ್ದಾರೆ.
ಅಲ್ಲದೇ, ಎಲ್ಲರೂ ಖಾದಿ ಉತ್ಪನ್ನಗಳನ್ನು ಖರೀದಿಸಿ, ಈ ಮೂಲಕ ಲಕ್ಷಾಂತರ ನೇಕಾರರನ್ನು ಸಬಲೀಕರಣ ಮಾಡುವ ನಿಟ್ಟಿನಲ್ಲಿ ಕೊಡುಗೆ ನೀಡಿ, ಬಾಪು ಅವರಿಗೂ ಇದು ನೀಡುವ ದೊಡ್ಡ ಗೌರವವಾಗುತ್ತದೆ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಶಾಪಿಂಗ್ ಫೆಸ್ಟಿವಲ್ನಲ್ಲಿ 15 ಸಾವಿರ ಮಾರಾಟಗಾರರು ಭಾಗಿಯಾಗಿದ್ದು, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.
At the Ahmedabad Shopping Festival I too could not resist from shopping! Purchased some Khadi products using the RuPay card.
I urge you all- keep buying Khadi and contribute to the empowerment of lakhs of weavers associated with the industry. It is also a great tribute to Bapu! pic.twitter.com/DVTAIwFJz2
— Narendra Modi (@narendramodi) January 17, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.