ವಾಷಿಂಗ್ಟನ್: 2008ರ ಮುಂಬಯಿ ದಾಳಿಯ ಪ್ರಮುಖ ಆರೋಪಿ, ಪ್ರಸ್ತುತ ಯುಎಸ್ ಜೈಲಿನಲ್ಲಿ 14 ವರ್ಷಗಳ ಸೆರೆವಾಸ ಅನುಭವಿಸುತ್ತಿರುವ ಉಗ್ರ ತಹವುರ್ ಹುಸೇನ್ ರಾಣಾ ಭಾರತಕ್ಕೆ ಗಡಿಪಾರುಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಡೊನಾಲ್ಡ್ ಟ್ರಂಪ್ ಆಡಳಿತದ ಸಂಪೂರ್ಣ ಸಹಕಾರದೊಂದಿಗೆ, ರಾಣಾನ ಗಡಿಪಾರಿಗೆ ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ. ಮುಂಬಯಿ ದಾಳಿಯ ಸಂಚು ರೂಪಿಸಿದ್ದಕ್ಕಾಗಿ ಈತನಿಗೆ ಅಮೆರಿಕಾ ಸೆರೆವಾಸ ಶಿಕ್ಷೆಯನ್ನು ನೀಡಿದ್ದು, ಈತನ ಸೆರೆವಾಸ 2012ರ ಡಿಸೆಂಬರ್ಗೆ ಅಂತ್ಯವಾಗಲಿದೆ.
ಪಾಕಿಸ್ಥಾನಿ-ಕೆನಡಿಯನ್ ಪ್ರಜೆಯಾಗಿರುವ ರಾಣಾ 166 ಜನರನ್ನು ಬಲಿತೆಗೆದುಕೊಂಡ 26/11 ಮುಂಬಯಿ ದಾಳಿ ನಡೆಸಿದಕ್ಕಾಗಿ 2009ರಲ್ಲಿ ಬಂಧಿತನಾಗಿದ್ದ. 2013ರಲ್ಲಿ ಈತನಿಗೆ 14 ವರ್ಷಗಳ ಸೆರೆವಾಸದ ಶಿಕ್ಷೆ ಘೋಷಣೆಯಾಯಿತು. ಅಮೆರಿಕಾ ಮಾಹಿತಿಗಳ ಪ್ರಕಾರ ಈತ ಡಿಸೆಂಬರ್ 2021 ರಂದು ಬಿಡುಗಡೆಗೊಳ್ಳಲಿದ್ದಾನೆ.
ಆತನ ಶಿಕ್ಷೆ ಪೂರ್ಣಗೊಳ್ಳುತ್ತಿದ್ದಂತೆ ಭಾರತಕ್ಕೆ ಗಡಿಪಾರು ಮಾಡಲಿದ್ದೇವೆ ಎಂದು ಅಮೆರಿಕಾ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಅದಕ್ಕೆ ಬೇಕಾದ ಪ್ರಕ್ರಿಯೆಗಳು ಈಗಿನಿಂದಲೇ ಆರಂಭಗೊಂಡಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.