ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಮೊದಲ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತೀಯ ನಾಗರಿಕರ ಸರಾಸರಿ ತಲಾ ಆದಾಯ ಶೇ.45ರಷ್ಟು ಏರಿಕೆ ಕಂಡಿದೆ ಎಂದು ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್(ಸಿಎಸ್ಓ) ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.
ಅಲ್ಲದೇ 2011-12 ಮತ್ತು 2018-19ರ ನಡುವೆ 7 ವರ್ಷಗಳ ಅವಧಿಯಲ್ಲಿ ಭಾರತೀಯ ಸರಾಸರಿ ತಲಾ ಆದಾಯ ದ್ವಿಗುಣಗೊಂಡಿದೆ. ಹಿಂದಿನ ವರ್ಷಗಳಲ್ಲಿ ವಾರ್ಷಿಕ ರೂ,63,642 ಇದ್ದ ಆದಾಯ, ಬಳಿಕದ ವರ್ಷಗಳಲ್ಲಿ ರೂ.1.25 ಲಕ್ಷಕ್ಕೆ ಏರಿಕೆಯಾಗಿದೆ.
ಪರ್ ಕ್ಯಾಪಿಟ ನೆಟ್ ನ್ಯಾಷನಲ್ ಇನ್ಕಂ 2018-19ರ ಸಾಲಿನಲ್ಲಿ ರೂ.1,25,397 ಇದ್ದು, 2017-18ನೇ ಸಾಲಿಗೆ ಹೋಲಿಸಿದರೆ ಶೇ.11.1ರಷ್ಟು ಏರಿಕೆ ಕಂಡಿದೆ.
ಆದರೂ, 2018-19ರಲ್ಲಿ ವಾಸ್ತವಿಕ ತಲಾ ಆದಾಯ (2011-12ದರಗಳಲ್ಲಿ) ರೂ 91,921 ರಷ್ಟಿದೆ.
2014-15 ಮತ್ತು 2016-17 ರ ನಡುವಿನ ಭಾರತದ ತಲಾ ಆದಾಯದ ಬೆಳವಣಿಗೆ ಭೂತಾನ್, ನೇಪಾಳ, ಚೀನಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ನೆರೆಹೊರೆಯವರಿಗಿಂತ ಕಡಿಮೆಯಾಗಿದೆ ಎಂದು ಗಮನಿಸಬೇಕು. ಭಾರತ ಕೇವಲ ಶ್ರೀಲಂಕಾಕ್ಕಿಂತ ಮುಂದೆ ಇದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.