ನವದೆಹಲಿ: ವಿದೇಶಿ ಕಂಪನಿಗಳು ಅಭಿವೃದ್ಧಿಪಡಿಸಿರುವ ಇನ್ನೋವೇಟಿವ್ ಮೆಡಿಸಿನ್ಗಳಿಗೆ 5 ವರ್ಷಗಳ ಮಟ್ಟಿಗೆ ದರ ನಿಯಂತ್ರಣದಿಂದ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಪ್ರಸ್ತುತ ವಿದೇಶದಲ್ಲಿ ಮಾತ್ರ ಇರುವ ಔಷಧಿಗಳು ಭಾರತೀಯ ರೋಗಿಗಳಿಗೂ ಲಭ್ಯವಾಗಲಿದೆ. ಅತೀ ಅಪರೂಪದ ವೈದ್ಯಕೀಯ ಸ್ಥಿತಿಗಳಿಗೆ ಬಳಸುವ ಆರ್ಫನ್ ಮೆಡಿಸಿನ್ಗಳನ್ನೂ ಇದು ಒಳಗೊಂಡಿದೆ.
ಅಲ್ಲದೇ, ಡ್ರಗ್ಸ್ ಪ್ರೈಸ್ ಕಂಟ್ರೋಟ್ ಆರ್ಡರ್ಗೆ ತಿದ್ದುಪಡಿಯನ್ನು ತಂದಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವಾಲಯ, ಇಂಡಿಯನ್ ಪೇಟೆಂಟ್ ಆಕ್ಟ್, 1970 ಅಡಿಯಲ್ಲಿ ದೇಶೀಯ ತಯಾರಕರು ತಯಾರಿಸಿರುವ ಔಷಧಿಗಳಿಗೂ 5 ವರ್ಷಗಳ ಮಟ್ಟಿಗೆ ದರ ನಿಯಂತ್ರಣ ವಿನಾಯಿತಿಯನ್ನು ನೀಡಲಾಗಿದೆ. ವಾಣಿಜ್ಯ ಮಾರುಕಟ್ಟೆಗೆ ಲಗ್ಗೆ ಇಟ್ಟ ದಿನಾಂಕದಿಂದ 5 ವರ್ಷಗಳವರೆಗೆ ಈ ವಿನಾಯಿತಿ ಇರಲಿದೆ.
ಇದರ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಔಷಧಿಗಳಿಗೆ 5 ವರ್ಷಗಳ ಕಾಲ ದರವನ್ನು ನಿಗದಿಪಡಿಸುವ ಅಧಿಕಾರವನ್ನು ಸರ್ಕಾರ ಬಿಟ್ಟುಕೊಟ್ಟಿದೆ. ಹೊಸ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.
source: www.livemint.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.