ನವದೆಹಲಿ: ತನ್ನ ವಿದೇಶಿ ಸಾಲವನ್ನು ರೂ.1.35 ಲಕ್ಷ ಕೋಟಿಗಳಿಗೆ ಇಳಿಸುವ ಮೂಲಕ ಭಾರತ ಮಹತ್ತರವಾದ ಸಾಧನೆಯನ್ನು ಮಾಡಿದೆ.
ಕಳೆದ ಎಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ ವಿದೇಶಿ ಸಾಲದಲ್ಲಿ ರೂ.1.35 ಲಕ್ಷ ಕೋಟಿ ಇಳಿಕೆಯಾಗಿದೆ. ಭಾರತ ವಿದೇಶಗಳಿಂದ ಸಾಲ ಪಡೆಯುವ ಪ್ರಮಾಣ ಕಡಿಮೆಯಾಗಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
2018ರ ಮಾರ್ಚ್ ಅಂತ್ಯದ ವೇಳೆ 52,970 ಕೋಟಿ ಡಾಲರ್ನಷ್ಟಿದ್ಥ ವಿದೇಶಿ ಸಾಲದ ಮೊತ್ತ, ಸೆಪ್ಟೆಂಬರ್ ಅಂತ್ಯದ ವೇಳೆಗೆ 51,040 ಕೋಟಿ ಡಾಲರ್ಗೆ ಇಳಿಕೆಯಾಗಿದೆ. ಅಂದರೆ 6 ತಿಂಗಳಲ್ಲಿ ಸಾಲದ ಮೊತ್ತ ಶೇ.3.6ರಷ್ಟು ಇಳಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ವರದಿ ತಿಳಿಸಿದೆ.
ಡಾಲರ್ ಸೇರಿದಂತೆ ಇತರ ಕರೆನ್ಸಿಗಳ ಎದುರು ಭಾರತದ ರೂಪಾಯಿ ಮೌಲ್ಯ ಬಲಗೊಂಡಿರುವುದು ಸಾಲದ ಪ್ರಮಾಣ ಇಳಿಯಲು ಸಹಾಯ ಮಾಡಿದೆ. ಸಾಲದ ಪ್ರಮಾಣ ಕಡಿಮೆಯಾಗಿರುವುದರಿಂದ ವಿತ್ತೀಯ ಕೊರತೆ ನಿಯಂತ್ರಣ ಸಾಧ್ಯವಾಗಲಿದೆ. ಅಲ್ಲದೇ, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಸಾಧನೆಗೆ ಇದು ಮತ್ತೊಂದು ಮೈಲಿಗಲ್ಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.