ನವದೆಹಲಿ: ಉಗ್ರರಿಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರ ನೀಡಲು ನಮಗೆ ಗೊತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತಕ್ಕೆ ಶಾಂತಿ ಬೇಕಾಗಿದೆ, ಆದರೆ ಉಗ್ರರ ಕೃತ್ಯಕ್ಕೆ ಅವರಿಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸಲು ನಮಗೆ ತಿಳಿದಿದೆ. ಸರ್ಜಿಕಲ್ ಸ್ಟ್ರೈಕ್ ಇದಕ್ಕೆ ಉತ್ತಮ ಉದಾಹರಣೆ ಎಂದರು.
ಆಂಧ್ರ ಪ್ರದೇಶದ ಕೆಲವು ಲೋಕಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರೊಂದಿಗೆ ವೀಡಿಯೋ ಕಾನ್ಫರೆನ್ಸ್ನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಹಿಂದೆ ಜಾಗತಿಕ ಸಮುದಾಯ ಕಾಶ್ಮೀರದ ಬಗ್ಗೆ ಮಾತನಾಡುತ್ತಿತ್ತು. ಈಗ ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಿದೆ. ಪಾಕಿಸ್ಥಾನದ ವಿರುದ್ಧದ ಭಾರತದ ಕ್ರಮಕ್ಕೆ ಇಡೀ ಜಗತ್ತಿನ ಬೆಂಬಲ ವ್ಯಕ್ತವಾಗಿದೆ’ ಎಂದಿದ್ದಾರೆ.
‘ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದು ಭಾರತವೇ ಹೊರತು ನಾನಲ್ಲ, 130 ಕೋಟಿ ಭಾರತೀಯರ ಬೆಂಬಲದಿಂದಾಗಿ ಭಾರತ ಈ ಸಾಧನೆ ಮಾಡಿದೆ. ಭಾರತ ಮೊದಲು ಎಂಬುದೇ ನಮ್ಮ ವಿದೇಶಾಂಗ ನೀತಿಯ ಮಂತ್ರ’ ಎಂದಿದ್ದಾರೆ.
ಪ್ರಜಾಪ್ರಭುತ್ವ ಎಂಬುದು ಒಂದು ಹಬ್ಬ. ನಮ್ಮ ಭವಿಷ್ಯವನ್ನು ರೂಪಿಸುವ ಹಬ್ಬ. ಯುವ ಜನತೆ ಭಾರತದ ಭವಿಷ್ಯದ ಕೇಂದ್ರ ಬಿಂದುವಾಗಿದೆ. ಯುವ ಜನತೆಗೆ ಅಭಿವೃದ್ಧಿಯ ಬಗ್ಗೆ ಕಾಳಜಿಯಿದೆ ಮತ್ತು ಭ್ರಷ್ಟಾಚಾರದ ಬಗ್ಗೆ ಕೋಪವಿದೆ ಎಂದಿದ್ದಾರೆ.
source: ndtv
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.