ನವದೆಹಲಿ: ಸುಮಾರು 21,700 ಅಡಿ ಎತ್ತರದ ಸಿಯಾಚಿನ್ ಗ್ಲೇಸಿಯರ್ನಲ್ಲಿ ಕೊರೆಯುವ ಚಳಿಯಲ್ಲಿ ನಿಂತು ದೇಶ ಕಾಯುವ ಯೋಧರು ಇನ್ನು ಮುಂದೆ ಸ್ನಾನ ಮಾಡಲು 90 ದಿನಗಳವರೆಗೆ ಕಾಯಬೇಕಾಗಿಲ್ಲ. ಶೀಘ್ರದಲ್ಲೇ ಅವರಿಗೆ, ದೇಶೀಯವಾಗಿ ಅಭಿವೃದ್ಧಿಪಡಿಸಲಾದ ವಾಟರ್ಲೆಸ್ ಬಾಡಿ ಹೈಜೀನ್ ಉತ್ಪನ್ನವನ್ನು ಕಳುಹಿಸಿಕೊಡಲಾಗುತ್ತಿದೆ.
ಚೀನಾದೊಂದಿಗಿನ ಗಡಿಯನ್ನು ಕಾಯುವ ಕೋಲ್ಕತ್ತಾ ಆಧಾರಿತ ಈಸ್ಟರ್ನ್ ಕಮಾಂಡ್, ಈಗಾಗಲೇ ಈ ಬಾಡಿ ವಾಶ್ನ್ನು ಪ್ರಯೋಗ ನಡೆಸಿದ್ದು, ಉತ್ಪನ್ನಗಳಿಗಾಗಿ ಆರ್ಡರ್ ಕೊಟ್ಟಿದೆ.
ಸಿಯಾಚಿನ್ ಗ್ಲೇಸಿಯರ್ನಲ್ಲಿ ಸುಮಾರು 3 ಸಾವಿರದಷ್ಟು ಯೋಧರು ನಿಯೋಜನೆಗೊಂಡಿದ್ದಾರೆ. ಇಲ್ಲಿ ತಾಪಮಾನ ಮೈನಸ್ 60 ಡಿಗ್ರಿವರೆಗೂ ಹೋಗುತ್ತದೆ. ಇಲ್ಲಿ ಗಡಿ ಕಾಯಲು ಭಾರತ ಸರ್ಕಾರಕ್ಕೆ ತಗಲುವ ವೆಚ್ಚ ದಿನಕ್ಕೆ 5ರಿಂದ 6 ಕೋಟಿ ರೂಪಾಯಿ.
ಕೊರೆಯುವ ಚಳಿ ಮತ್ತು ನೀರಿನ ಅಭಾವದಿಂದಾಗಿ ಇಲ್ಲಿನ ಯೋಧರಿಗೆ ಸ್ನಾನ ಮಾಡುವುದು ಸಾಧ್ಯವೇ ಇಲ್ಲದ ಮಾತು. ಹೀಗಾಗಿ 3 ತಿಂಗಳಿಗೊಮ್ಮೆ ಇವರು ಸ್ನಾನ ಮಾಡುತ್ತಾರೆ.
‘ಆರ್ಮಿ ಡಿಸೈನ್ ಬ್ಯೂರೋ’ ಇಲ್ಲಿನ ಯೋಧರಿಗಾಗಿ ಬಾಡಿ ವಾಶ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದು, ಇದರ ಮೂಲಕ ವಾರಕ್ಕೆ ಎರಡು ಬಾರಿ ಯೋಧರು ತಮ್ಮ ಶರೀರವನ್ನು ಸ್ವಚ್ಛ ಮಾಡಿಕೊಳ್ಳಬಹುದು. ಶೀಘ್ರದಲ್ಲೇ ಈ ಉತ್ಪನ್ನ ಅವರಿಗೆ ಪೂರೈಕೆ ಆಗುವ ನಿರೀಕ್ಷೆ ಇದೆ.
source: hindusthantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.