ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಹೊಸ ವರ್ಷದ ಸಂದೇಶವನ್ನು ಕಳುಹಿಸಿದ್ದು, ಉಭಯ ದೇಶಗಳ ನಡುವಣ ಬಾಂಧವ್ಯ ರಚನಾತ್ಮಕ ಮತ್ತು ಕ್ರಿಯಾಶೀಲ ಮಾದರಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದಿದ್ದಾರೆ.
ಅಕ್ಟೋಬರ್ನಲ್ಲಿ ಭಾರತ-ರಷ್ಯಾ ವಾರ್ಷಿಕ ಸಭೆಯಲ್ಲಿ ನಡೆದ ಒಪ್ಪಂದಗಳು, ಉಭಯ ದೇಶಗಳ ನಡುವಣ ಕಾರ್ಯತಾಂತ್ರಿಕ ಬಾಂಧವ್ಯವನ್ನು, ಪಾಲುದಾರಿತ್ವವನ್ನು ಬಲಪಡಿಸಲು ಸಾಕಷ್ಟು ಕೊಡುಗೆಗಳನ್ನು ನೀಡುತ್ತಿದೆ ಎಂದಿದ್ದಾರೆ.
ಜಂಟಿ ಪ್ರಯತ್ನಗಳಿಂದ ವಿವಿಧ ವಲಯಗಳಲ್ಲಿನ ಪರಸ್ಪರ ಪ್ರಯೋಜನಕಾರಿ ಸಹಕಾರಗಳ ಪ್ರಗತಿ ಸಾಧ್ಯವಾಗಲಿದೆ, ಪ್ರಾದೇಶಿಕ ಮತ್ತು ಯುಎಸ್, ಬ್ರಿಕ್ಸ್, ಎಸ್ಸಿಓ, ಜಿ20ಗಳೊಳಗಿನ ಜಾಗತಿಕ ಅಜೆಂಡಾಗಳಲ್ಲಿ ಉತ್ತಮ ಸಂಯೋಜಕತ್ವ ಸಾಧಿಸುವುದು ಕೂಡ ಬಾಂಧವ್ಯದ ಪ್ರಗತಿಗೆ ಸಹಕಾರಿ ಎಂದು ಪುಟಿನ್ ಅಭಿಪ್ರಾಯಿಸಿರುವುದಾಗಿ ದೆಹಲಿಯಲ್ಲಿನ ರಷ್ಯನ್ ರಾಯಭಾರ ಕಚೇರಿ ತಿಳಿಸಿದೆ.
source: ndtv
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.