ನವದೆಹಲಿ: ಇಂದಿನಿಂದ ದೇಶದಾದ್ಯಂತ ಹೊಸ ಆಹಾರ ಗುಣಮಟ್ಟ ಜಾರಿಯಾಗಲಿದೆ. ಎಲ್ಲಾ ವಿಧದ ದವಸ ಧಾನ್ಯ, ಸಾವಯವ ಆಹಾರ, ಜೇನುತುಪ್ಪಗಳಿಗೂ ಈ ಗುಣಮಟ್ಟ ಅನ್ವಯವಾಗಲಿದೆ.
ಹೊಸ ಗುಣಮಟ್ಟ ನಿಯಮ ಜಾರಿಯಾಗುವ ಸಂದರ್ಭ ಆಹಾರ ಉದ್ಯಮಗಳಿಗೆ ಬದಲಾವಣೆಯ ಅವಧಿಯಾಗಿ 6 ತಿಂಗಳುಗಳ ಅವಕಾಶವನ್ನು ನೀಡಲಾಗುತ್ತದೆ ಎದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) ಸೋಮವಾರ ಹೇಳಿದೆ.
ಹಣ್ಣು ಹಂಪಲು, ತರಕಾರಿ ಮತ್ತು ಅದರ ಉತ್ಪನ್ನಗಳಿಗೆ ಮೈಕ್ರೋಬಯೋಲಾಜಿಕಲ್ ಸ್ಟ್ಯಾಂಡರ್ಡ್ ಜಾರಿಯಾಗಲಿದೆ ಎಂದು FSSAI ತಿಳಿಸಿದೆ.
ಯ್ಯಾಂಟಿಬಯೋಟಿಕ್ ಮತ್ತು ಔಷಧೀಯ ಸಕ್ರಿಯ ಪದಾರ್ಥಗಳ ಸಹಿಷ್ಣುತೆಯ ಮಿತಿ ಜನವರಿ 1, 2019 ರಂದು ಜಾರಿಗೆ ಬರಲಿದೆ ಎಂದು ಹೇಳಿಕೆ ತಿಳಿಸಿದೆ.
2019 ರ ಏಪ್ರಿಲ್ 1 ರಿಂದ ಆಲ್ಕೋಹಾಲಿಕ್ ಪಾನೀಯಗಳ ಮಾನದಂಡಗಳು ಜಾರಿಗೆ ಬರಲಿದೆ ಎಂದು ಮತ್ತಷ್ಟು ಹೇಳಿದೆ.
ಆಹಾರ ಭದ್ರತಾ ನಿಬಂಧನೆಗಳು ಜುಲೈ 1, 2019 ರಿಂದ ಜಾರಿಗೆ ಬರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.